ಅಮಿತ್ ಶಾ ಹೊಗಳಿಕೆ ಕೆಲಸಕ್ಕೆ ಪ್ರೇರಣೆ, ಬಿಜೆಪಿಗೆ ಹೋಗೋಲ್ಲ: ಕಾಂಗ್ರೆಸ್ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ

ದಾವಣಗೆರೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿರಿಯ ನಾಯಕರು, ಅಂಥವರು ನನ್ನನ್ನು ಹೊಗಳಿದ್ದಾರೆ. ಇದರಿಂದ ಮತ್ತಷ್ಟು ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ಅಂಹತವರು ನನ್ನನ್ನು ಹೊಗಳಿದ್ದಕ್ಕೆ ಸಹಜವಾಗಿಯೇ ಖುಷಿಯಾಗುತ್ತದೆ. ಸಂಸದೆಯಾಗಿ ಒಂದು ವರ್ಷವಾಗಿದೆ. ಅನುಭವದೊಂದಿಗೆ ಸ್ವಯಂ ವ್ಯಕ್ತಿತ್ವವೂ ಇರುತ್ತದೆ. ಹೀಗಾಗಿ ಅಮಿತ್ ಶಾ ಹೊಗಳಿದ್ದರಿಂದ ಮತ್ತಷ್ಟು ಒಳ್ಳೆಯ ಕೆಲಸ ಮಾಡುತ್ತೇನೆ. ಅವರು ಹೊಗಳಿದಾಕ್ಷಣ ಬಿಜೆಪಿಗೆ ಹೋಗೋಕೆ ಆಗುವುದಿಲ್ಲ. ನಮ್ಮ ಕೆಲಸವನ್ನು ನಾವು ಸರಿಯಾಗಿ ಮಾಡಿದರೆ ಸಹಜವಾಗಿಯೇ ಶ್ರೇಯ ಬಂದೇ ಬರುತ್ತದೆ ಎಂದು ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read