ಗ್ಯಾಂಗ್ ಸ್ಟರ್ ಜೊತೆ ಐಎಎಸ್ ಅಧಿಕಾರಿ ಪತ್ನಿ ಪ್ರೀತಿ; ದುರಂತದಲ್ಲಿ ಅಂತ್ಯ ಕಂಡ ಪ್ರೇಮಕಥೆ…!

ಗುಜರಾತ್ ಕೇಡರ್ ಐಎಎಸ್ ಅಧಿಕಾರಿ ರಂಜಿತ್ ಕುಮಾರ್‌ ಪತ್ನಿ ಸೂರ್ಯ ಜೆ ಆತ್ಮಹತ್ಯೆ ಪ್ರಕರಣದಲ್ಲಿ ಅನೇಕ ವಿಷ್ಯಗಳು ಹೊರಬಿದ್ದಿವೆ. ಸೂರ್ಯ ಜೆ ಎರಡು ಮಕ್ಕಳ ತಾಯಿ. 40 ವರ್ಷದ ಸೂರ್ಯ ಜೆಗೆ ತಮಿಳುನಾಡಿನ ಗ್ಯಾಂಗ್‌ ಸ್ಟರ್‌ ಮಹಾರಾಜನ ಮೇಲೆ 9 ತಿಂಗಳ ಹಿಂದೆ ಪ್ರೀತಿ ಚಿಗುರಿತ್ತು. ಇಬ್ಬರೂ ಬಿಟ್ಟಿರಲಾರದಷ್ಟು ಮಾತುಕತೆ ನಡೆಸುತ್ತಿದ್ದರು. ಈ ವಿಷ್ಯ ಗೊತ್ತಾದ ರಂಜಿತ್‌, ಪತ್ನಿಗೆ ಬುದ್ಧಿ ಹೇಳಿದ್ದರು. ಆದ್ರೆ ಪತಿ ಮಾತು ಕೇಳದ ಸೂರ್ಯ ಜೆ ಮನೆ ಬಿಟ್ಟಿದ್ದಳು.

ಗ್ಯಾಂಗ್‌ ಸ್ಟರ್‌ ಮಹಾರಾಜನ ಬಳಿ ಹೋದಾಗ್ಲೇ ಆಕೆಗೆ ಸತ್ಯ ಗೊತ್ತಾಗಿದ್ದು. ಮಹಾರಾಜ ಆಕೆಯನ್ನು ಪ್ರೀತಿಸ್ತಿರಲಿಲ್ಲ. ಹಣಕ್ಕಾಗಿ ಪ್ರೀತಿಯ ನಾಟಕವಾಡ್ತಿದ್ದ. ಇಬ್ಬರೂ ಸೇರಿ ಸಲೂನ್‌ ತೆಗೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಅದಕ್ಕೆ ತಮಿಳುನಾಡು ಮಧುರೈನ 50 ವರ್ಷದ ರಾಜಕುಮಾರ್‌ ಪತ್ನಿ ಪೈನಾನ್ಸರ್‌ ಮೈಥಿಲಿ ರಾಜಲಕ್ಷ್ಮಿ ಭೇಟಿಯಾಗಿ 75 ಲಕ್ಷ ಸಾಲ ಪಡೆದಿದ್ದಾರೆ. ಹೆಚ್ಚಿನ ಬಡ್ಡಿಗೆ ಪಡೆದ ಸಾಲವನ್ನು ಇವರ ಬಳಿ ತೀರಿಸೋಕೆ ಸಾಧ್ಯವಾಗ್ತಿರಲಿಲ್ಲ. ಸೂರ್ಯ ಬಳಿ ಇದ್ದ ಹಣ ಖಾಲಿಯಾಗಿತ್ತು. ಆಸ್ತಿ ಮಾರಾಟ ಮಾಡುವಂತೆ ರಾಜಲಕ್ಷ್ಮಿ ಹೇಳಿದ್ದರು. ಆದ್ರೆ ಅದಕ್ಕೆ ಮನಸ್ಸು ಮಾಡದ ಸೂರ್ಯ ಹಾಗೂ ಮಹಾರಾಜ, ರಾಜಲಕ್ಷ್ಮಿಯ 15 ವರ್ಷದ ಮಗನನ್ನು ಅಪಹರಿಸಿದ್ದರು. ರಾಜಲಕ್ಷ್ಮಿ ಪೊಲೀಸರಿಗೆ ಕರೆ ಮಾಡಿದ್ದರಿಂದ ಭಯಗೊಂಡವರು ಆಟೋ ಚಾಲಕ ಹಾಗೂ ಮಗುವನ್ನು ಸುರಕ್ಷಿತವಾಗಿ ಬಿಟ್ಟು ಹೋಗಿದ್ದರು. ಅನುಮಾನಗೊಂಡ ರಾಜಲಕ್ಷ್ಮಿ, ಮಹಾರಾಜ ಮತ್ತು ಸೂರ್ಯನ ಹೆಸರು ಹೇಳಿದ್ದರು.

ತನಿಖೆ ವೇಳೆ ಸೂರ್ಯನ ಅಕ್ರಮ ಸಂಬಂಧ ಹೊರ ಬಿದ್ದಿದೆ. ಇದ್ರಿಂದ ನೊಂದು, ಪತಿಗೆ ಕ್ಷಮೆ ಕೇಳಲು ಸೂರ್ಯ ಮನೆಗೆ ಬಂದಿದ್ದಳು. ಆದ್ರೆ ಸೂರ್ಯ ಮನೆಯಲ್ಲಿರಲಿಲ್ಲ. ಹಾಗಾಗಿ ಮನೆ ಹೊರಗೆ ವಿಷ ಸೇವನೆ ಮಾಡಿದ್ದಾಳೆ. ಡೆತ್‌ ನೋಟ್‌ ಬರೆದಿಟ್ಟಿದ್ದ ಸೂರ್ಯ, ಪತಿಯಿಂದ ಯಾವುದೇ ತಪ್ಪಾಗಿಲ್ಲ. ಗ್ಯಾಂಗ್ಸ್ಟಾರ್‌ ನಂಬಿ ಮೋಸ ಹೋಗಿದ್ದೇನೆ ಎಂದು ಬರೆದಿದ್ದಾಳೆ. ಅತ್ತ ಸೂರ್ಯ ತಾಯಿ ಕೂಡ ಮಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಡ ಹೇರಲಾಗಿದೆ ಎಂಬ ದೂರು ನೀಡಿದ್ದಾಳೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read