ಅಮೆರಿಕದ ಖ್ಯಾತ ಗಾಯಕನನ್ನು ಕಾಡುತ್ತಿದೆ ಅಪರೂಪದ ಸಕ್ಕರೆ ಕಾಯಿಲೆ…!

ಅಮೆರಿಕದ ಖ್ಯಾತ ಗಾಯಕ ಜೇಮ್ಸ್ ಲ್ಯಾನ್ಸ್ ಬಾಸ್ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇತ್ತೀಚೆಗಷ್ಟೆ ಈ ಆಘಾತಕಾರಿ ಮಾಹಿತಿಯನ್ನು ಜೇಮ್ಸ್‌ ಹಂಚಿಕೊಂಡಿದ್ದರು. ಅವರಿಗೆ ಟೈಪ್ 1.5 ಮಧುಮೇಹವಿದೆಯಂತೆ. ಆಹಾರ ಮತ್ತು ವ್ಯಾಯಾಮದ ಹೊರತಾಗಿಯೂ ಅವರ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿಲ್ಲ. ಪರೀಕ್ಷೆಗೆ ಒಳಗಾದಾಗ ಟೈಪ್ 1.5 ಡಯಾಬಿಟಿಸ್‌ ಇರುವುದು ಪತ್ತೆಯಾಗಿದೆ.

ಟೈಪ್ 1.5 ಡಯಾಬಿಟಿಸ್‌ ಎಂದರೇನು?

ಟೈಪ್ 1.5 ಮಧುಮೇಹವನ್ನು ವಯಸ್ಕರಲ್ಲಿ ಸುಪ್ತ ಸ್ವಯಂ ನಿರೋಧಕ ಮಧುಮೇಹ ಎಂದೂ ಕರೆಯಲಾಗುತ್ತದೆ. ಇದು ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ನಡುವಿನ ಸ್ಥಿತಿಯಾಗಿದೆ. ಇದರಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಮೇದೋಜ್ಜೀರಕ ಗ್ರಂಥಿಯ ಇನ್ಸುಲಿನ್ ಉತ್ಪಾದಿಸುವ ಕೋಶಗಳ ಮೇಲೆ ಕ್ರಮೇಣ ದಾಳಿ ಮಾಡುತ್ತದೆ. ಈ ಕಾರಣದಿಂದಾಗಿ ದೇಹದಲ್ಲಿ ಇನ್ಸುಲಿನ್ ಕೊರತೆಯಾಗುತ್ತದೆ. ಶೇ.10 ರಷ್ಟು ಮಧುಮೇಹ ರೋಗಿಗಳು ಟೈಪ್ 1.5 ಮಧುಮೇಹದಿಂದ ಬಳಲುತ್ತಿದ್ದಾರೆ.

ಟೈಪ್ 1.5 ಮಧುಮೇಹದ ಲಕ್ಷಣಗಳು

ಟೈಪ್ 1.5 ಮಧುಮೇಹವು ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್‌ನ ಮಿಶ್ರ ಲಕ್ಷಣಗಳನ್ನು ತೋರಿಸುತ್ತದೆ. ಬಾಯಾರಿಕೆ, ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು, ಆಯಾಸ, ಹಠಾತ್ ತೂಕ ನಷ್ಟ, ಮಂದ ದೃಷ್ಟಿ, ಗಾಯ ಗುಣವಾಗುವಲ್ಲಿ ನಿಧಾನ ಇವೆಲ್ಲವೂ ಪ್ರಮುಖ ಲಕ್ಷಣಗಳಾಗಿವೆ.

ಟೈಪ್ 1.5 ಮಧುಮೇಹಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಇದು ಸ್ವಯಂ ನಿರೋಧಕ ಕಾಯಿಲೆ ಎಂದು ನಂಬಲಾಗಿದೆ. ಇದರಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ತನ್ನದೇ ಆದ ಜೀವಕೋಶಗಳ ಮೇಲೆ ತಪ್ಪಾಗಿ ದಾಳಿ ಮಾಡುತ್ತದೆ.

ಟೈಪ್ 1.5 ಡಯಾಬಿಟಿಸ್‌ಗೆ ಟೈಪ್ 2 ಮಧುಮೇಹದ ರೀತಿಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಇದು ಮುಖ್ಯವಾಗಿ ಇನ್ಸುಲಿನ್ ಚಿಕಿತ್ಸೆಯನ್ನು ಒಳಗೊಂಡಿದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಆಹಾರ ಮತ್ತು ವ್ಯಾಯಾಮವೂ ಮುಖ್ಯವಾಗಿದೆ.

ಟೈಪ್ 1.5 ಮಧುಮೇಹ ಹೊಂದಿರುವ ರೋಗಿಗಳು ಹೆಚ್ಚಾಗಿ ಥೈರಾಯ್ಡ್‌ ತೊಂದರೆಯಿಂದಲೂ ಬಳಲುತ್ತಾರೆ. ಈ ಕಾಯಿಲೆಗೆ ವಯಸ್ಸಿನ ಹಂಗಿಲ್ಲ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಮೂಲಕ ಮಧುಮೇಹದ ತೊಡಕುಗಳನ್ನು ಕಡಿಮೆ ಮಾಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read