ಅಮೆರಿಕಾ ವ್ಯಕ್ತಿಯ ದಿಟ್ಟ ನಿರ್ಧಾರ: 9-5 ಕೆಲಸ ತೊರೆದು ಬೆಕ್ಕಿನೊಂದಿಗೆ ಪೆಸಿಫಿಕ್ ಸಾಗರ ಪಯಣ | Watch Video

ಒರೆಗಾನ್: ಅಮೆರಿಕಾದ ಒಬ್ಬ ವ್ಯಕ್ತಿ ತನ್ನ ಕನಸುಗಳನ್ನು ಬೆನ್ನಟ್ಟಲು ತೋರಿದ ಧೈರ್ಯದಿಂದಾಗಿ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾರೆ. ಆಲಿವರ್ ವಿಡ್ಜ್ ಎಂಬ 29 ವರ್ಷದ ಈ ವ್ಯಕ್ತಿ, ದಿನದ 9-5 ರ routine ಕೆಲಸವನ್ನು ತೊರೆದು ಸಾಹಸಮಯ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತಮ್ಮ ಜೀವನದ ಸಂಪಾದನೆಯನ್ನೆಲ್ಲಾ ಖರ್ಚು ಮಾಡಿ ದೋಣಿಯೊಂದನ್ನು ಖರೀದಿಸಿ, ತಮ್ಮ ಪ್ರೀತಿಯ ಬೆಕ್ಕಿನೊಂದಿಗೆ ಪೆಸಿಫಿಕ್ ಸಾಗರದಲ್ಲಿ ಪಯಣಿಸುತ್ತಿದ್ದಾರೆ. ಇಂದು, ವಿಡ್ಜ್ ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದು, ಅವರೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

ಹಿಂದೆ ಟೈರ್ ಕಂಪನಿಯೊಂದರಲ್ಲಿ ವ್ಯವಸ್ಥಾಪಕ ಹುದ್ದೆಯಲ್ಲಿದ್ದ ವಿಡ್ಜ್ ಅವರ ಜೀವನ ಒಂದು ಕುತ್ತಿಗೆ ನೋವಿನಿಂದ ಸಂಪೂರ್ಣವಾಗಿ ಬದಲಾಯಿತು. ಈ ನೋವು ಅವರನ್ನು ಪಾರ್ಶ್ವವಾಯು ಅಪಾಯಕ್ಕೆ ತಳ್ಳಿತ್ತು. ಈ ಘಟನೆಯಿಂದ ವಿಡ್ಜ್ ಅವರ ಜೀವನದ ದೃಷ್ಟಿಕೋನವೇ ಬದಲಾಯಿತು. ಪ್ರತಿದಿನ ಕಚೇರಿಗೆ ಅಂದವಾಗಿ ತಯಾರಾಗಿ ಹೋಗುವುದು ಅವರಿಗೆ ಇಷ್ಟವಿರಲಿಲ್ಲವಂತೆ.

“ಜಗತ್ತು ಸ್ವಲ್ಪ ಬೇಸರ ತರಿಸುವಂತಿದೆ. ನನ್ನ ಕೆಲಸದ ಬಗ್ಗೆ ನನಗಿದ್ದ ಭಾವನೆ ಬಹುಶಃ ಅನೇಕರಿಗೂ ಇರಬಹುದು. ವರ್ಷಕ್ಕೆ ₹1.2 ಕೋಟಿ ಗಳಿಸುತ್ತಿದ್ದರೂ, ಎಲ್ಲವೂ ಸಾಕಾಗುತ್ತಿಲ್ಲ ಎನಿಸುತ್ತಿತ್ತು. ಜನರು ಇದೇ ರೀತಿ ಕಷ್ಟಪಟ್ಟು ದುಡಿದು ಏನೂ ಸಿಗದಂತಾಗಿ ಬೇಸತ್ತಿದ್ದಾರೆ ಮತ್ತು ಇದರಿಂದ ಹೊರಬರಲು ಒಂದು ದಾರಿ ಹುಡುಕುತ್ತಿದ್ದಾರೆಂದು ನಾನು ಭಾವಿಸುತ್ತೇನೆ,” ಎಂದು ವಿಡ್ಜ್ ಹೇಳುತ್ತಾರೆ.

ಹೀಗಾಗಿ, ಕ್ಯಾಲಿಫೋರ್ನಿಯಾದಿಂದ ಹವಾಯಿಗೆ ದೋಣಿಯಲ್ಲಿ ಪ್ರಯಾಣಿಸುವವರಿಂದ ಪ್ರೇರಿತರಾದ ವಿಡ್ಜ್, ತಮ್ಮ ನಿವೃತ್ತಿ ಉಳಿತಾಯದ ₹40 ಲಕ್ಷವನ್ನು ಬಳಸಿ ದೋಣಿಯನ್ನು ಖರೀದಿಸಿ ದುರಸ್ತಿ ಮಾಡಿದರು. ದೋಣಿ ಚಲಾಯಿಸುವುದನ್ನು ಯೂಟ್ಯೂಬ್‌ನಿಂದ ಕಲಿತರು. ಶೀಘ್ರದಲ್ಲೇ, ತಮ್ಮ ಬೆಕ್ಕು ಫೀನಿಕ್ಸ್‌ನೊಂದಿಗೆ ಸಮುದ್ರ ಪಯಣವನ್ನು ಪ್ರಾರಂಭಿಸಿದರು. ವಿಡ್ಜ್ ತಮ್ಮ ಸಮುದ್ರ ಜೀವನದ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಪ್ರಾರಂಭಿಸಿದರು. ಕಾಲಾನಂತರದಲ್ಲಿ, ಸಮುದ್ರದಲ್ಲಿನ ಅವರ ದಿನನಿತ್ಯದ ಸವಾಲುಗಳನ್ನು ತೋರಿಸುವ ಅವರ ವಿಷಯವನ್ನು ಇಷ್ಟಪಡುವ ಒಂದು ದೊಡ್ಡ ಆನ್‌ಲೈನ್ ಸಮುದಾಯವನ್ನು ಅವರು ಗಳಿಸಿದರು. “ನಾನು ಈ ಹಿಂದೆ ಅಸಾಧ್ಯವೆಂದು ಭಾವಿಸಿದ ಎಲ್ಲವನ್ನೂ ಈಗ ಸಾಧಿಸಿದ್ದೇನೆ,” ಎಂದು ಅವರು ಹೇಳುತ್ತಾರೆ.

ತಮ್ಮ ಸಾಮಾಜಿಕ ಮಾಧ್ಯಮದ ಅನುಯಾಯಿಗಳ ಬಗ್ಗೆ ಮಾತನಾಡಿದ ವಿಡ್ಜ್, ಇತರರಿಗಿಂತ ಭಿನ್ನವಾಗಿ ಅಪಾಯಗಳನ್ನು ತೆಗೆದುಕೊಳ್ಳುವ ತಮ್ಮ ಧೈರ್ಯವೇ ಇದಕ್ಕೆ ಕಾರಣವೆಂದು ನಂಬುತ್ತಾರೆ. ತಮ್ಮ ವಿಡಿಯೋಗಳು ಜನರಿಗೆ ಸ್ಫೂರ್ತಿಯನ್ನು ನೀಡುತ್ತವೆ ಎಂದು ಅವರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read