ನ್ಯೂಯಾರ್ಕ್: ಅಮೆರಿಕಾದ ನ್ಯೂಯಾರ್ಕ್ ನಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮೂಲದ ನಾಲ್ವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪಶ್ಚಿಮ ವರ್ಜಿನಿಯಾದ ಆಧ್ಯಾತ್ಮಿಕ ಸ್ಥಳ ಮಾರ್ಷಲ್ ಕೌಂಟಿಯಲ್ಲಿರುವ ಪ್ರಭುಪಾದರ ಪ್ಯಾಲೇಸ್ ಆಫ್ ಗೋಲ್ಡ್ ಗೆ ತೆರಳುತ್ತಿದ್ದ ವೇಳೆ ನ್ಯೂಯಾರ್ಕ್ ನ ಬಫಲೋದಿಂದ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿದ್ದರು. ಆದರೆ ನಾಲ್ವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಮಾರ್ಷಲ್ ಕೌಂಟಿ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಆಶಾ ದಿವಾನ್ (85), ಕಿಶೋರ್ ದಿವಾನ್ (89), ಶೈಲೇಶ್ ದಿವಾನ್ (86) ಹಾಗೂ ಗೀತಾ ದಿವಾನ್ (84) ಎಂದು ಗುರುತಿಸಲಾಗಿದೆ.