ಅಂಬಿ ಹುಟ್ಟುಹಬ್ಬದಂದು ಮಗನ ಸ್ಪೆಷಲ್ ಗಿಫ್ಟ್; ಅಪ್ಪನ ಹಾಡುಗಳಿಗೆ ಭಾವಿಪತ್ನಿಯೊಂದಿಗೆ ಹೆಜ್ಜೆಹಾಕಿದ ಅಭಿಷೇಕ್

ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ 71 ನೇ ಹುಟ್ಟುಹಬ್ಬ ಆಚರಣೆ ನೆರವೇರಿದೆ. ಅವರ ಅಭಿಮಾನಿಗಳು ನಾಡಿನಾದ್ಯಂತ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ.

ಅಂಬರೀಶ್ ಮಗ ಅಭಿಷೇಕ್ ಅಪ್ಪನ ಹುಟ್ಟುಹಬ್ಬದಂದು ವಿಶೇಷ ವಿಡಿಯೋ ಮೂಲಕ ತಂದೆಯ ಹುಟ್ಟುಹಬ್ಬ ಆಚರಿಸಿದ್ದಾರೆ. ಭಾವಿ ಪತ್ನಿ ಅವಿವಾ ಬಿದ್ದಪ್ಪಾ ಅವರೊಂದಿಗೆ ಅಭಿಷೇಕ್, ಅಂಬರೀಶ್ ನಟನೆಯ ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ.

KRG ಕನೆಕ್ಟ್ಸ್ ಬಿಡುಗಡೆ ಮಾಡಿದ ಇನ್‌ಸ್ಟಾಗ್ರಾಮ್ ರೀಲ್‌ಗಳಲ್ಲಿ ಅಭಿಷೇಕ್ ಮತ್ತು ಅವಿವಾ ನೃತ್ಯ ಮಾಡಿದ್ದಾರೆ. ಬೆಂಗಳೂರಿನಲ್ಲಿರುವ ಅಂಬರೀಶ್ ಅವರ ಸ್ಮಾರಕಕ್ಕೆ ಸುಮಲತಾ ಮತ್ತು ಅಭಿಷೇಕ್ ಪೂಜೆ ಸಲ್ಲಿಸಿದ್ದರು.

ಅಭಿಷೇಕ್ ಮತ್ತು ಅವಿವಾ ಜೂನ್ 5 ರಂದು ಬೆಂಗಳೂರಿನಲ್ಲಿ ವಿವಾಹವಾಗಲಿದ್ದಾರೆ. ಜೂನ್ 7 ರಂದು ಅರಮನೆ ಮೈದಾನದಲ್ಲಿ ಆರತಕ್ಷತೆ ನಡೆಯಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read