ಬೆಂಗಳೂರು: ವ್ಯಕ್ತಿಯೊಬ್ಬರು ಅಮೆಜಾನ್ ಆಪ್ ನಲ್ಲಿ ದುಬಾರಿ ಮೊಬೈಲ್ ಬುಕ್ ಮಾಡಿದರೆ ಪಾರ್ಸಲ್ ನಲ್ಲಿ ಟೈಲ್ಸ್ ಕಲ್ಲು ಬಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆನ್ ಲೈನ್ ಶಾಪಿಂಗ್ ಮಾಡುವಾಗ ಎಷ್ಟೇ ಎಚ್ಚರ ವಹಿಸಿದರೂ ಕಡಿಮೆಯೇ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು, ಆನ್ ಲೈನ್ ವಂಚಕರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಂಗಳೂರಿನ ಪ್ರೇಮಾನಂದ್ ಎಂಬುವವರು ಅಮೆಜಾನ್ ಆಪ್ ನಲ್ಲಿ 1 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಬುಕ್ ಮಾಡಿದ್ದರು. ಆದರೆ ಡೆಲಿವರಿ ಬಾಯ್ ತಂದುಕೊಟ್ಟ ಪಾರ್ಸನಲ್ ನಲ್ಲಿ ಬಂದಿದ್ದು ಕಲ್ಲು. ಮೊಬೈಲ್ ಎಂದು ಪಾರ್ಸಲ್ ಓಪನ್ ಮಾಡಿದ ಪ್ರೇಮಾನಂದ್ ದಂಗಾಗಿದ್ದಾರೆ.
ಇಂಜಿನಿಯರ್ ಪ್ರೇಮಾನಂದ್ ಕೆಲ ದಿನಗಳ ಹಿಂದೆ ಅಮೆಜಾನ್ ಆಪ್ ನಲ್ಲಿ 1 ಲಕ್ಷದ 85 ಸಾವಿರ ರೂಪಾಯಿ ಮೌಲ್ಯದ ಸ್ಯಾಮ್ಸಂಗ್ ಝಡ್ ಫೋಲ್ಡ್ ಮೊಬೈಲ್ ಬುಕ್ ಮಾಡಿದ್ದರು. ಆಪ್ ನಲ್ಲಿ ನಿಗದಿಯಾದ ಡೇಟ್ ನಂತೆ ಆರ್ಡರ್ ಡೆಲಿವರಿಯಾಗಿದೆ. ಪಾರ್ಸಲ್ ತೆರೆದು ನೋಡಿದರೆ ಮೊಬೈಲ್ ಬದಲು ಬಾಕ್ಸ್ ನಲ್ಲಿ ಒಂದು ಟೈಲ್ಸ್ ಕಲ್ಲು ಇದೆ. ಇದನ್ನು ನೋಡಿ ಶಾಕ್ ಆದ ಪ್ರೇಮಾನಂದ್ ಡೆಲಿವರಿ ಬಾಯ್ ಗೆ ತಕ್ಷಣ ಕರೆ ಮಾಡಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಇಲ್ಲ. ಬಳಿಕ ಎನ್ ಸಿ ಆರ್ ಪಿ ಪೋರ್ಟ್ ನಲ್ಲಿ ದೂರು ನೀಡಿದ್ದಾರೆ.
ಅಲ್ಲದೇ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ ಐ ಆರ್ ದಾಖಲಾಗಿದೆ.
