ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ 6 ನೇ ಪದಕ: 57 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚು ಗೆದ್ದ ಅಮನ್ ಸೆಹ್ರಾವತ್

ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ 57 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಪೋರ್ಟೊ ರಿಕೊದ ಡೇರಿಯನ್ ಟಾಯ್ ಕ್ರೂಜ್ ಅವರನ್ನು 13-5 ರಿಂದ ಸೋಲಿಸಿದ ಅಮನ್ ಸೆಹ್ರಾವತ್ ಭಾರತಕ್ಕೆ 6ನೇ ಪದಕ ತಂದಿದ್ದಾರೆ.

ಈ ವರ್ಷ ಭಾರತದ ಪರ ಸ್ಪರ್ಧಿಸಿದ ಏಕೈಕ ಪುರುಷ ಕುಸ್ತಿಪಟು ಅವರು. ಒಲಿಂಪಿಕ್ ಕ್ರೀಡಾಕೂಟದಲ್ಲಿ ತನ್ನ ಮೊದಲ ಪ್ರದರ್ಶನದಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಕ್ರೂಜ್ ಎರಡನೇ ಸುತ್ತಿನಲ್ಲಿ ಬೃಹತ್ ಮುನ್ನಡೆಯನ್ನು ಬಿಟ್ಟುಕೊಡುವ ಮೊದಲು ಪಂದ್ಯದ ಬಹುಪಾಲು ಚೆನ್ನಾಗಿ ಹೋರಾಡಿದರು. ಇಬ್ಬರ ನಡುವೆ ಕಂಚಿನ ಪದಕ ಪಡೆಯಲು ರೋಮಾಂಚನಕಾರಿ ಹೋರಾಟ ನಡೆಯಿತು.

57 ಕೆಜಿ ಕುಸ್ತಿ ವಿಭಾಗದಲ್ಲಿ ಆಮನ್ ಮೂರನೇ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾರೆ. ಅವರು ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ 7ನೇ ಕುಸ್ತಿಪಟುವಾಗಿದ್ದಾರೆ. ಈ ವರ್ಷ ರೆಸ್ಲಿಂಗ್ ನಲ್ಲಿ ಭಾರತಕ್ಕೆ ಕುಸ್ತಿಯಲ್ಲಿ ಇದು ಮೊದಲ ಪದಕವಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read