ನಟಿಗೆ ದೇವಸ್ಥಾನ ಪ್ರವೇಶಕ್ಕೆ ನಿರಾಕರಣೆ; ಧಾರ್ಮಿಕ ತಾರತಮ್ಯ ಬದಲಾಗಲಿ ಎಂದ ಅಮಲಾ ಪೌಲ್

ಬಹು ಭಾಷಾ ನಟಿ ಅಮಲಾ ಪೌಲ್ ಕೇರಳದ ಎರ್ನಾಕುಲಂನಲ್ಲಿರುವ ಮಹಾದೇವ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಅವರು ಕ್ರಿಶ್ಚಿಯನ್ ಎಂಬ ಕಾರಣಕ್ಕೆ ದೇವಸ್ಥಾನದ ಆಡಳಿತ ಮಂಡಳಿ, ಪ್ರವೇಶ ನಿರಾಕರಿಸಿದೆ.

ಅನ್ಯ ಧರ್ಮಿಯರಿಗೆ ದೇವಸ್ಥಾನ ಪ್ರವೇಶಿಸಲು ಇಲ್ಲಿ ಅವಕಾಶ ನೀಡುವುದಿಲ್ಲ ಎನ್ನಲಾಗಿದ್ದು, ಹೀಗಾಗಿಯೇ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಅಮಲಾ ಪೌಲ್ ಅವರಿಗೆ ಒಳಗೆ ಹೋಗಲು ಅನುಮತಿ ನೀಡಿಲ್ಲ.

ಹೊರಗಡೆಯಿಂದಲೇ ದೇವರ ದರ್ಶನ ಪಡೆದು ಹೋಗಲು ಅಧಿಕಾರಿಗಳು ತಿಳಿಸಿದ್ದು, ಅದರಂತೆ ದರ್ಶನ ಪಡೆದ ಅಮಲಾ ಪೌಲ್ ಬಳಿಕ ದೇವಾಲಯದ ನೋಂದಣಿ ಪುಸ್ತಕದಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ.

ನನಗೆ ದೇವಾಲಯ ಪ್ರವೇಶಕ್ಕೆ ನಿರಾಕರಿಸಿದರೂ ಸಹ ದೂರದಿಂದಲೇ ದೈವಿಕ ಅನುಭವವಾಯಿತು ಎಂದು ಹೇಳಿರುವ ಅಮಲಾ ಪೌಲ್, ಆದಷ್ಟು ಬೇಗ ಧಾರ್ಮಿಕ ತಾರತಮ್ಯ ಬದಲಾಗಲಿ ಎಂದು ಆಶಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read