ಗುತ್ತಿಗೆದಾರನಿಗೆ ಬೆದರಿಕೆ ಆರೋಪ : ಬಿಜೆಪಿ ಮುಖಂಡ H.C ತಮ್ಮೇಶ್ ಗೌಡ ವಿರುದ್ಧ FIR

ಬೆಂಗಳೂರು: ಕಾಂಪೌಂಡ್ ನಿರ್ಮಾಣದ ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಿಜೆಪಿ ಮುಖಂಡ ಎಚ್.ಸಿ.ತಮ್ಮೇಶ್ ಗೌಡ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗುತ್ತಿಗೆದಾರ ದಯಾನಂದ ಕುಮಾರ್ (32) ಎಂಬುವವರು ದೂರು ನೀಡಿದ್ದು, ತಮ್ಮೇಶ್ ಗೌಡ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಅಮೃತಹಳ್ಳಿಯ ದಾಸರಹಳ್ಳಿಯಲ್ಲಿ ಅಶ್ವಿನ್ ಎಂಬುವವರ ಸೈಟ್ ಇದ್ದು, ಅದರ ಸುತ್ತಾ ಕಾಂಪೌಂಡ್ ನಿರ್ಮಿಸಲು ದಯಾನಂದ್ಗೆ ಅಶ್ವಿನ್ ಕಾಂಟ್ರಾಕ್ಟ್ ನೀಡಿದ್ದರು. ಸೈಟ್ ಬಳಿಗೆ ಸತೀಶ್, ಚಂದ್ರಪ್ಪ ಮತ್ತು ಸಹಚರರು ಆಗಮಿಸಿ ಇದು ನಮಗೆ ಸೇರಿದ ಸೈಟ್ ಕಾಂಪೌಂಡ್ ಹಾಕಬೇಡಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೇ ದಯಾನಂದ್ ಗೆ ತಮ್ಮೇಶ್ ಗೌಡ ಕರೆ ಮಾಡಿ ಕಾಂಪೌಂಡ್ ಕೆಲಸವನ್ನು ನಿಲ್ಲಿಸಿ ವಾಪಸ್ಸು ಹೋಗುವಂತೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read