ಒಳ ಮೀಸಲಾತಿಯಲ್ಲಿ ಅನ್ಯಾಯ ಆರೋಪ: ಅಲೆಮಾರಿಗಳ ಮನವೊಲಿಕೆಗೆ ಸಿಎಂ ಯತ್ನ

ಬೆಂಗಳೂರು: ಒಳ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಅಲೆಮಾರಿಗಳು ಆಕ್ರೋಶ ವ್ಯಕ್ತಪಡಿಸಿ ಹೋರಾಟ ಕೈಗೊಂಡಿದ್ದು, ಅವರ ಮನವೊಲಿಕೆಗೆ ಸಿಎಂ ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದಾರೆ.

ಶನಿವಾರ ಬುಡ್ಗ ಜಂಗಮ, ಶಿಳ್ಳೆ ಕ್ಯಾತ, ಹಂದಿ ಜೋಗಿ, ದಕ್ಕಲಿಗ ಸೇರಿ ವಿವಿಧ ಅಲೆಮಾರಿ ಸಮುದಾಯಗಳ ಪ್ರಮುಖರೊಂದಿಗೆ ಸಿಎಂ ಸಭೆ ನಡೆಸಿದ್ದಾರೆ. ಮೂರು ಪ್ರವರ್ಗಗಳ ಸೂತ್ರದಿಂದ ಅಲೆಮಾರಿಗಳಿಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಶೇಕಡ 1ರಷ್ಟು ಒಳ ಮೀಸಲಾತಿ ನೀಡಬೇಕೆಂದು ಅಲೆಮಾರಿ ಸಮುದಾಯದ ಮುಖಂಡರು ಸಿಎಂಗೆ ಮನವಿ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಈಗ ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಸಂಪುಟ ಸದಸ್ಯರು ಒಮ್ಮತದಿಂದ ತೀರ್ಮಾನಕ್ಕೆ ಬಂದಿದ್ದು ನಾನು ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ, ಈ ಸಮುದಾಯದ ಸ್ಥಿತಿಗತಿಯ ಸ್ಪಷ್ಟ ಅರಿವಿದೆ. ಅವರಿಗಾಗಿ ವಿಶೇಷ ಆರ್ಥಿಕ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು. ಪರಿಶಿಷ್ಟ ಜಾತಿಗಳ ಶಾಶ್ವತ ಆಯೋಗ ರಚಿಸುತ್ತಿದ್ದು, ಆಯೋಗಕ್ಕೆ ಅರ್ಜಿ ಹಾಕಿ ಬೇಡಿಕೆ ಸಲ್ಲಿಸುವ ಮೂಲಕ ನ್ಯಾಯ ಸಮ್ಮತ ಹಕ್ಕನ್ನು ಪ್ರತಿಪಾದಿಸಬಹುದು. ಆದ್ದರಿಂದ ಅನುಕೂಲವಾಗುತ್ತದೆ. ಸರ್ಕಾರ ಅಲೆಮಾರಿ ಸಮುದಾಯದ ಪರವಾಗಿರುತ್ತದೆ. ಎಲ್ಲಾ ರೀತಿಯ ಅನುಕೂಲಗಳನ್ನು ಆದ್ಯತೆ ಮೇಲೆ ಮಾಡಿಕೊಡಲಿದ್ದು ಹೋರಾಟ ಕೈಬಿಡಬೇಕೆಂದು ಮನವಿ ಮಾಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read