ಕಪ್ಪು ಎಳ್ಳು ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯದ ಲಾಭ

ಕಪ್ಪು ಎಳ್ಳನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ಹಲವು ಆರೋಗ್ಯದ ಲಾಭಗಳನ್ನು ಪಡೆದುಕೊಳ್ಳಬಹುದು. ಕಪ್ಪು ಎಳ್ಳಿನ ಉಂಡೆ ತಯಾರಿಸಿ ತಿನ್ನುವುದರಿಂದ ಕ್ಯಾಲ್ಸಿಯಂ ಸಮಸ್ಯೆ ನಿಮ್ಮ ಹತ್ತಿರವೂ ಸುಳಿಯದು.

ಇದರಲ್ಲಿ ಫೈಬರ್, ಮ್ಯಾಗ್ನೀಷಿಯಂ ಮೊದಲಾದ ಪೋಷಕಾಂಶಗಳಿದ್ದು ವಿಪರೀತ ತಲೆ ಕೂದಲು ಉದುರುವವರು ನಿತ್ಯ ಇದನ್ನು ಸೇವಿಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಲಿವರ್ ಆರೋಗ್ಯವನ್ನು ಕಾಪಾಡುವ ಇದು ಕ್ಯಾನ್ಸರ್ ನಿಮ್ಮ ಬಳಿ ಬರದಂತೆಯೂ ನೋಡಿಕೊಳ್ಳುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುವ ಎಳ್ಳು ಮಲಬದ್ಧತೆ ಸಮಸ್ಯೆಯನ್ನು ದೂರಮಾಡುತ್ತದೆ. ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತದೆ. ಕರುಳಿನ ಆರೋಗ್ಯವನ್ನು ಕಾಪಾಡಿ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ.

ಎಲುಬುಗಳ ಆರೋಗ್ಯವನ್ನು ಕಾಪಾಡುತ್ತದೆ. ಆಸ್ಟಿಯೊಪೊರೋಸಿಸ್ ಎಂಬ ಎಲುಬಿನ ದುರ್ಬಲತೆಯ ಸಮಸ್ಯೆಗೂ ಇದು ಪರಿಹಾರವಾಗಬಹುದು. ಮಹಿಳೆಯರನ್ನು ಬಹುವಾಗಿ ಕಾಡುವ ಕ್ಯಾಲ್ಸಿಯಂ ಕೊರತೆ ಸಮಸ್ಯೆಗೆ ಕಪ್ಪೆಳ್ಳು ಅತ್ಯುತ್ತಮ ಮದ್ದಾಗಬಲ್ಲದು. ಹಾಗಾಗಿ ಮಹಿಳೆಯರು ಇದನ್ನು ನಿತ್ಯ ಸೇವಿಸುವುದು ಬಹಳ ಒಳ್ಳೆಯದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read