ಸಿರಿ ಧಾನ್ಯ ಸೇವಿಸೋದ್ರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಲಾಭ…!

ಒಣ ಪ್ರದೇಶದಲ್ಲಿ ಕಡಿಮೆ ನೀರಿನಿಂದ ಬೆಳೆಯುವ ಸಿರಿಧಾನ್ಯಗಳನ್ನು ಪ್ರತಿ ನಿತ್ಯ ನಮ್ಮ ಡಯಟ್ ನಲ್ಲಿ ಸೇರಿಸಿಕೊಂಡರೆ ಆರೋಗ್ಯ ವೃದ್ಧಿಯಾಗುತ್ತದೆ. ಇವುಗಳನ್ನು ಹೆಲ್ದಿ, ಫ್ರೆಂಡ್ಲಿ ಅಂತನೂ ಹೇಳಲಾಗುತ್ತದೆ.

ಸಿರಿಧಾನ್ಯಗಳಲ್ಲಿ ಹಲವು ವೆರೈಟಿಗಳಿವೆ. ಜೋಳ, ರಾಗಿ, ಸಜ್ಜೆ, ಬರಗು, ನವಣೆ, ಅರಕ, ಸಾಮೆ, ಕೊರಲೆ, ಊದಲು, ಮಡಿಕೆ ಇತ್ಯಾದಿಗಳು ಸಿರಿಧಾನ್ಯಗಳಾಗಿ ಗುರುತಿಸಿಕೊಂಡಿವೆ. ಈ ಧಾನ್ಯಗಳ ಬಣ್ಣಗಳಲ್ಲಿ ವ್ಯತ್ಯಾಸವಿದ್ದರೂ ಆಕಾರದಲ್ಲಿ ಸಾಮ್ಯತೆ ಇರುತ್ತವೆ.

ಕೆಲವು ಸಿರಿಧಾನ್ಯಗಳಲ್ಲಿ ನಾರಿನಂಶ ಹೆಚ್ಚಿದ್ದರೆ, ಇನ್ನೂ ಕೆಲವು ಧಾನ್ಯಗಳಲ್ಲಿ ಅಕ್ಕಿ ಮತ್ತು ಗೋಧಿಗಿಂತ ಹತ್ತು ಪಟ್ಟು ಹೆಚ್ಚಿನ ಕ್ಯಾಲ್ಸಿಯಂ ಮತ್ತು ಖನಿಜಗಳು ಇರುತ್ತವೆ. ಪ್ರತಿ ಧಾನ್ಯಗಳು ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.

ಇತ್ತೀಚಿನ ಕೆಲವು ಸಂಶೋಧನೆಗಳು ಕೂಡ ಸಿರಿಧಾನ್ಯಗಳಿಂದ ಮಾಡಿದ ಆಹಾರ ಆರೋಗ್ಯಕ್ಕೆ ಉತ್ತಮ ಎಂದು ಹೇಳಿವೆ. ಜೋಳ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ರಾಗಿ ಮಕ್ಕಳ ಮೆದುಳಿನ ಬೆಳವಣಿಗೆಗೆ ಬೆಸ್ಟ್. ಅರ್ಕ ರಕ್ತ ಶುದ್ಧೀಕರಣ ಮತ್ತು ಮಲಬದ್ಧತೆ ನಿವಾರಣೆಗೆ ಒಳ್ಳೆಯದು. ಸಾಮೆ ಫಲವಂತಿಕೆ ಹೆಚ್ಚಿಸುತ್ತದೆ. ಕೊರಲೆ ಥೈರಾಯ್ಡ್, ರಕ್ತದೊತ್ತಡ, ಸಂಧಿವಾತ, ಬೊಜ್ಜು ನಿವಾರಣೆಗೆ ಉತ್ತಮ. ಊದಲು ಜಾಂಡೀಸ್, ಲಿವರ್ ಮತ್ತು ಕಿಡ್ನಿ ಸಮಸ್ಯೆಗಳನ್ನು ನಿವಾರಿಸುತ್ತದೆ. ನವಣೆ ನರಗಳಿಗೆ ಶಕ್ತಿ ತುಂಬುತ್ತದೆ. ಸಜ್ಜೆ ಹೃದಯದ ಆರೋಗ್ಯ ಹೆಚ್ಚಿಸುತ್ತದೆ.

ಮಧುಮೇಹಿಗಳು ಸಿರಿಧಾನ್ಯಗಳನ್ನು ಸೇವನೆ ಮಾಡುವುದು ಬಹಳ ಒಳ್ಳೆಯದು. ಈ ಆಹಾರ ನಿಧಾನವಾಗಿ ಪಚನವಾಗುವ ಕಾರಣ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುವುದಿಲ್ಲ. ಆದ್ದರಿಂದ ಸಿರಿಧಾನ್ಯ ಮಧುಮೇಹಿಗಳ ಪಾಲಿಗೆ ವರದಾನವಾಗಿ ಪರಿಣಮಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read