ಲಂಚಾವತಾರದ ಅಮಾನುಷತೆಯನ್ನು ಎತ್ತಿ ತೋರುವ ಘಟನೆಯೊಂದು ಉತ್ತರ ಪ್ರದೇಶದ ಅಲಿಘಡದಲ್ಲಿ ಸಂಭವಿಸಿದೆ. 25 ವರ್ಷ ವಯಸ್ಸಿನ ತುಂಬು ಗರ್ಭಿಣಿಯೊಬ್ಬರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಲು 1,000 ರೂ.ಗಳ ಲಂಚ ಕೇಳಿದ ಕಾರಣ ಆಕೆಗೆ ರಸ್ತೆಯಲ್ಲೇ ಹೆರಿಗೆಯಾಗಿದೆ.
1,000 ರೂ. ನೀಡದೇ ಇದ್ದಲ್ಲಿ ಆಸ್ಪತ್ರೆಯೊಳಗೆ ಪ್ರವೇಶ ನೀಡುವುದಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಪಟ್ಟು ಹಿಡಿದ ಪರಿಣಾಮ ಆಕೆಗೆ ರಸ್ತೆಯಲ್ಲೇ ಹೆರಿಗೆ ಆಗಬೇಕಾದ ಪರಿಸ್ಥಿತಿ ಬಂದಿದೆ. ಈ ವೇಳೆ ರಸ್ತೆಯಲ್ಲಿ ಓಡಾಡುತ್ತಿದ್ದ ಅನೇಕ ಮಹಿಳೆಯರು ಗರ್ಭಿಣಿಯ ನೆರವಿಗೆ ಧಾವಿಸಿದ್ದಾರೆ.
ಘಟನೆಯ ವಿಡಿಯೋ ವೈರಲ್ ಆಗಿದ್ದು, ಅಲ್ಲಿದ್ದ ಅನೇಕ ಮಹಿಳೆಯರು ಗರ್ಭಿಣಿ ಹೆಂಗಸಿಗೆ ನೆರವಾಗುತ್ತಿರುವುದನ್ನು ನೋಡಬಹುದಾಗಿದೆ.
ನೋಡ ನೋಡುತ್ತಲೇ ದೊಡ್ಡ ಪ್ರಮಾಣದಲ್ಲಿ ಜನಸ್ತೋಮ ನೆರೆದ ಕಾರಣ ಗಾಬರಿಗೊಂಡ ಆಸ್ಪತ್ರೆ ಸಿಬ್ಬಂದಿ, ತಾಯಿ ಹಾಗೂ ಮಗುವನ್ನು ಅಲಿಘಡದ ಜೆಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದು, ಇಬ್ಬರೂ ಈಗ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.
Aligarh, Uttar Pradesh: Shame on humanity: Poor Dalit woman refused to deliver, child was born in the bushes. pic.twitter.com/6tCneiIVU1
— Kaustuv Ray (@kaustuvray) May 22, 2023