ಭೂಮಿ ಮೇಲಿರುವ ಮನುಕುಲವನ್ನು ಸದಾ ಕುತೂಹಲದಲ್ಲಿಡುವ ವಿಚಾರಗಳಲ್ಲಿ ಅನ್ಯಗ್ರಹ ಜೀವಿಗಳೂ ಸೇರಿವೆ. 2023 ರಲ್ಲಿ ಅನ್ಯಗ್ರಹ ಜೀವಿಗಳು ನಮ್ಮ ಗ್ರಹಕ್ಕೆ ಬರಲಿವೆ ಎಂಬ ನಿರೀಕ್ಷೆಗಳು ನಿಜವಾಗುವ ಹಾಗೆ ಗೋಚರಿಸುತ್ತಿವೆ.
ಬೊಲಿವಿಯಾದ ಗ್ರಾಮವೊಂದರಲ್ಲಿ ಅನ್ಯಗ್ರಹ ಜೀವಿಯೊಂದು ಮೃತಪಟ್ಟ ಸ್ಥಿತಿಯಲ್ಲಿ ಕಂಡಿದೆ. ಆದರೆ ಈ ಜೀವಿಯ ದೇಹ ದಿಢೀರ್ ಎಂದು ನಾಪತ್ತೆಯಾಗಿದೆ. ಬೊಲಿವಿಯಾದ ಲಾ ಪಾಜ಼್‌ಮ ಹುರೈನಾ ಎಂಬ ಪಟ್ಟಣದಲ್ಲಿ ಸಂಭವಿಸಿದೆ. ಸುದ್ದಿ ವಾಹಿನಿಗಳಲ್ಲಿ ಬಿತ್ತರಗೊಂಡ ಅನೇಕ ಚಿತ್ರಗಳು ಹಾಗೂ ವಿಡಿಯೋಗಳು ಭಾರೀ ಅಚ್ಚರಿ ಮೂಡಿಸಿವೆ.
ಬೀದಿ ನಾಯಿಯೊಂದು ಈ ಅನ್ಯಗ್ರಹ ಜೀವಿಯನ್ನು ಅಚ್ಚರಿಯಿಂದ ನೋಡುತ್ತಿರುವ ದೃಶ್ಯವೊಂದು ವೈರಲ್ ಆಗಿತ್ತು. ನಾಯಿಗಳಿಗೆ ಕೆಲವೊಂದು ಅಲೌಕಿಕ ಶಕ್ತಿಗಳು ಗೋಚರಿಸುತ್ತವೆ ಎನ್ನುವ ಬಲವಾದ ನಂಬಿಕೆ ಇದೆ. ನಾಯಿಗಳ ನಿರಂತರ ಬೊಗಳುವಿಕೆ ಕಾರಣದಿಂದ ಈ ಪ್ರದೇಶದಲ್ಲಿ ಅಲೌಕಿಕ ವಸ್ತುಗಳು ಇರುವ ಶಂಕೆ ಮೂಡಿತ್ತು.
ಮತ್ತೊಂದು ವಿಡಿಯೋದಲ್ಲಿ ಯುಎಫ್‌ಓ ರೀತಿಯ ವಸ್ತುವೊಂದು ಆಗಸದಲ್ಲಿ ತೇಲಾಡುತ್ತಿರುವುದನ್ನು ನೋಡಬಹುದಾಗಿದೆ.
ಈ ಜೀವಿಯ ದೇಹವನ್ನು ನೋಡುವ ಎರಡು ರಾತ್ರಿಗಳ ಮುನ್ನ ಆಗಸದಲ್ಲಿ ಹಸಿರು ಬಣ್ಣದ ಬೃಹತ್ ಬೆಳಕೊಂದು ಮೂಡಿದ್ದನ್ನು ಗ್ರಾಮಸ್ಥರು ನೋಡಿದ್ದರು. ಬಹುಶಃ ಅದು ಈ ಜೀವಿಯನ್ನು ಭೂಮಿಗೆ ತಂದು ಬಿಟ್ಟ ಗಗನನೌಕೆ ಇರಬಹುದು ಎಂದು ಊಹಿಸಲಾಗಿದೆ.
https://twitter.com/F10HD_BOLIVIA/status/1641607743176843265?ref_src=twsrc%5Etfw%7Ctwcamp%5Etweetembed%7Ctwterm%5E1641607743176843265%7Ctwgr%5Eddedbae480d4c1a32e999b9bcb4d24012fbd6f52%7Ctwcon%5Es1_&ref_url=https%3A%2F%2Fwww.freepressjournal.in%2Fviral%2Falien-found-dead-on-earth-it-mysteriously-disappeared-later-from-a-south-american-village
https://twitter.com/NuestroDiario/status/1641456764314091521?ref_src=twsrc%5Etfw%7Ctwcamp%5Etweetembed%7Ctwterm%5E1641456764314091521%7Ctwgr%5Eddedbae480d4c1a32e999b9bcb4d24012fbd6f52%7Ctwcon%5Es1_&ref_url=https%3A%2F%2Fwww.freepressjournal.in%2Fviral%2Falien-found-dead-on-earth-it-mysteriously-disappeared-later-from-a-south-american-village