ALERT : ವಾಹನ ಸವಾರರ ಗಮನಕ್ಕೆ : ಫಾಸ್ಟ್ಯಾಗ್ ʻKYCʼ ನವೀಕರಣಕ್ಕೆ ಎರಡೇ ದಿನ ಬಾಕಿ

ನವದೆಹಲಿ :ವಾಹನ ಸವಾರರೇ ಗಮನಿಸಿ,  ಅಪೂರ್ಣ KYC ಹೊಂದಿರುವ ಫಾಸ್ಟ್ ಟ್ಯಾಗ್ ಗಳು ಜನವರಿ 31 ರ ನಂತರ ನಿಷ್ಕ್ರಿಯವಾಗಲಿದೆ ಅಥವಾ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಹೀಗಾಗಿ ತಪ್ಪದೇ ಕೆವೈಸಿ ಅಪ್‌ ಡೇಟ್‌ ಮಾಡಿಕೊಳ್ಳಿ.

ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಚಲನೆಯನ್ನು ಒದಗಿಸಲು, ಎನ್ಎಚ್ಎಐ (NHAI) ‘ಒಂದು ವಾಹನ, ಒಂದು ಫಾಸ್ಟ್ಯಾಗ್’ ಎಂಬ ನಿಯಮ ಜಾರಿಗೆ ತಂದಿದೆ.

ಬಳಕೆದಾರರು ತಮ್ಮ ಇತ್ತೀಚಿನ ಫಾಸ್ಟ್ ಟ್ಯಾಗ್ ನ KYC ಪೂರ್ಣಗೊಂಡಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಫಾಸ್ಟ್ ಟ್ಯಾಗ್ ಬಳಕೆದಾರರು ‘ಒಂದು ವಾಹನ, ಒಂದು ಫಾಸ್ಟ್ಟ್ಯಾಗ್’ ಅನ್ನು ಸಹ ಅನುಸರಿಸಬೇಕು ಮತ್ತು ಆಯಾ ಬ್ಯಾಂಕ್ಗಳ ಮೂಲಕ ಈ ಹಿಂದೆ ನೀಡಲಾದ ಎಲ್ಲಾ ಫಾಸ್ಟ್ ಟ್ಯಾಗ್ ಗಳನ್ನು ತ್ಯಜಿಸಬೇಕು. 31 ಜನವರಿ 2024 ರ ನಂತರ ಹಿಂದಿನ ಟ್ಯಾಗ್ ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಅಥವಾ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ.

ಇತ್ತೀಚಿನ ಫಾಸ್ಟ್ ಟ್ಯಾಗ್ ಖಾತೆ ಮಾತ್ರ ಸಕ್ರಿಯವಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಫಾಸ್ಟ್ ಟ್ಯಾಗ್ ಬಳಕೆದಾರರು ಹತ್ತಿರದ ಟೋಲ್ ಪ್ಲಾಜಾಗಳು ಅಥವಾ ಆಯಾ ವಿತರಕ ಬ್ಯಾಂಕ್ಗಳ ಟೋಲ್-ಫ್ರೀ ಗ್ರಾಹಕ ಸೇವಾ ಸಂಖ್ಯೆಯನ್ನು ಸಂಪರ್ಕಿಸಬಹುದು. ಆರ್ಬಿಐ ಆದೇಶವನ್ನು ಉಲ್ಲಂಘಿಸಿ ನಿರ್ದಿಷ್ಟ ವಾಹನಕ್ಕೆ ಬಹು ಫಾಸ್ಟ್ಟ್ಯಾಗ್ಗಳನ್ನು ನೀಡಲಾಗಿದೆ ಮತ್ತು ಕೆವೈಸಿ ಇಲ್ಲದೆ ಫಾಸ್ಟ್ಟ್ಯಾಗ್ಗಳನ್ನು ನೀಡಲಾಗಿದೆ ಎಂಬ ಇತ್ತೀಚಿನ ವರದಿಗಳ ನಂತರ ಎನ್ಎಚ್ಎಐ ಈ ಕ್ರಮ ಕೈಗೊಂಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read