ALERT : ಯುವಕರಲ್ಲಿ ಹೆಚ್ಚುತ್ತಿದೆ ಮಾರಣಾಂತಿಕ ಕ್ಯಾನ್ಸರ್ : ಈ ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ..!

ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಾಗಿದ್ದು, ಇದು ಇಂದಿನ ಕಾಲದ ದೊಡ್ಡ ಸಮಸ್ಯೆಯಾಗಿದೆ. ಈ ಮೊದಲು ಈ ರೋಗವು ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು, ಆದರೆ ಈಗ ಯುವಕರಲ್ಲಿ ಸಹ ಕಾಯಿಲೆ ಬರುತ್ತಿದೆ.

ಯುವಕರಲ್ಲಿ ಕ್ಯಾನ್ಸರ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವುದು ಆತಂಕಕಾರಿ ಪರಿಸ್ಥಿತಿಯಾಗಿದೆ. ಇದರ ಹಿಂದೆ ಈ ಕೆಟ್ಟ ಜೀವನಶೈಲಿಯಿದೆ.

ಹೌದು. ಎಲ್ಲಾ ವಯೋಮಾನದವರಲ್ಲಿ, 30-39 ವರ್ಷ ವಯಸ್ಸಿನ ಯುವಕರು 2010 ಕ್ಕೆ ಹೋಲಿಸಿದರೆ 2019 ರಲ್ಲಿ ಆರಂಭಿಕ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇಕಡಾ 19.4 ರಷ್ಟು ಹೆಚ್ಚಳವವಾಗಿದೆ ಎಂದು ಅಧ್ಯಯನದಲ್ಲಿ ಇದು ಬಹಿರಂಗವಾಗಿದೆ. ಅಧ್ಯಯನದ ಪ್ರಕಾರ, ಜೀವನಶೈಲಿ ಅಂಶಗಳಾದ ಬೊಜ್ಜು, ಮದ್ಯಪಾನ, ಧೂಮಪಾನ, ಕಳಪೆ ನಿದ್ರೆ ಮತ್ತು ಜಡವಾಗಿರುವುದು ಯುವ ಕ್ಯಾನ್ಸರ್ ಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಕ್ಯಾನ್ಸರ್ ಕಾರಕ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು ಸೇರಿದಂತೆ ಪರಿಸರ ಬದಲಾವಣೆಗಳು ಕ್ಯಾನ್ಸರ್ ಪ್ರಕರಣಗಳನ್ನು ಹೆಚ್ಚಿಸುತ್ತಿವೆ. ಅಧ್ಯಯನದ ಪ್ರಕಾರ, ಜಠರಗರುಳಿನ ಕ್ಯಾನ್ಸರ್ ವೇಗವಾಗಿ ಹೆಚ್ಚಳವಾಗಿದೆ. ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 2022 ರಲ್ಲಿ 14.6 ಲಕ್ಷದಿಂದ 2025 ರಲ್ಲಿ 15.7 ಲಕ್ಷಕ್ಕೆ ಏರುವ ನಿರೀಕ್ಷೆಯಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮ ಈ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ ಪ್ರತಿ ಒಂಬತ್ತು ಜನರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಕ್ಯಾನ್ಸರ್ಗಳಲ್ಲಿ, ಲಿಂಫಾಯ್ಡ್ ಲ್ಯುಕೇಮಿಯಾ ಪ್ರಕರಣಗಳು ಅತಿ ಹೆಚ್ಚು ಎಂದು ಕಂಡುಬಂದಿದೆ. 2020 ಕ್ಕೆ ಹೋಲಿಸಿದರೆ 2025 ರಲ್ಲಿ ಕ್ಯಾನ್ಸರ್ ಪ್ರಕರಣಗಳು ಶೇಕಡಾ 12.8 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read