ಬೆಂಗಳೂರು : ವಾಹನಗಳನ್ನ ಚಲಾಯಿಸುವಾಗ ಮೊಬೈಲ್ ಬಳಸೋದು ಅಪರಾಧ ಎಂದು ಗೊತ್ತಿದ್ದರೂ ಸಾರಿಗೆ ಬಸ್ ಚಾಲಕರು ಪದೇ ಪದೇ ತಪ್ಪು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಚ್ಚೆತ್ತ ಬಿಎಂಟಿಸಿ ಕಠಿಣ ಕ್ರಮ ಕೈಗೊಂಡಿದೆ . ಇನ್ಮುಂದೆ ಈ ತಪ್ಪು ಮಾಡಿದರೆ ಶಿಕ್ಷೆ ಗ್ಯಾರೆಂಟಿ ಎಂದು ಎಚ್ಚರಿಸಿದೆ.
ಚಾಲನೆ ವೇಳೆ ಮೊಬೈಲ್ ಬಳಸಿದ್ರೆ, ಚಾಟ್ ಮಾಡಿದ್ರೆ, ಹೆಡ್ ಫೋನ್ ಬಳಸಿದ್ರೆ ಶಿಕ್ಷೆ ನೀಡಲು ತೀರ್ಮಾನಿಸಲಾಗಿದೆ. ಮೊದಲನೇ ಬಾರಿ ತಪ್ಪು ಮಾಡಿದ್ರೆ 15 ದಿನಗಳ ಅಮಾನತು, ಶಿಸ್ತು ಕ್ರಮ ( ನಿಯಮ -23) ವೇತನ 5000 ರೂ ಕಡಿತ ಹಾಗೂ ಅಮಾನತು ತೆರವು ಬಳಿಕ ಬೇರೆ ಘಟಕಕ್ಕೆ ವರ್ಗಾವಣೆ.
2 ನೇ ಬಾರಿ ತಪ್ಪು ಮಾಡಿದ್ರೆ 15 ದಿನಗಳ ಅಮಾನತು, ಶಿಸ್ತು ಕ್ರಮ ( ನಿಯಮ -23) , ವರ್ಗಾವಣೆ , ವಾರ್ಷಿಕ ಬಡ್ತಿ 1 ವರ್ಷಕ್ಕೆ ತಡೆ
3 ನೇ ಬಾರಿ ತಪ್ಪು ಮಾಡಿದ್ರೆ 15 ದಿನಗಳ ಅಮಾನತು, ಶಿಸ್ತು ಕ್ರಮ, ವರ್ಗಾವಣೆ , ವಾರ್ಷಿಕ ಬಡ್ತಿ 2 ವರ್ಷಕ್ಕೆ ತಡೆ ಅಥವಾ 10,000 ಕಡಿತ
4 ನೇ ಬಾರಿ ತಪ್ಪು ಮಾಡಿದ್ರೆ 15 ದಿನಗಳ ಅಮಾನತು, ಶಿಸ್ತು ಕ್ರಮ, ವರ್ಗಾವಣೆ , ಶಾಶ್ವತ ಬಡ್ತಿ ಇಳಿಕೆ/ 2 ವರ್ಷ ತಡೆ ಅಥವಾ 20,000 ಕಡಿತ
5 ನೇ ಬಾರಿ ತಪ್ಪು ಮಾಡಿದ್ರೆ 15 ದಿನಗಳ ಅಮಾನತು, ಶಿಸ್ತು ಕ್ರಮ, ವರ್ಗಾವಣೆ , ಶಾಶ್ವತ ಬಡ್ತಿಗೆ ಶಾಶ್ವತ ತಡೆ ಅಥವಾ 25.000 ರೂ ಕಡಿತವಾಗುವ ಸಾಧ್ಯತೆ.