ಹಾವೇರಿ: ರೈತರೇ ಎಚ್ಚರ..! ಟ್ರ್ಯಾಕ್ಟರ್ ರೋಟರ್ ಯಂತ್ರಕ್ಕೆ ಸಿಲುಕಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಘಟನೆ ಹಾವೇರಿ ತಾಲೂಕಿನ ನೆಗಳೂರಿನಲ್ಲಿ ನಡೆದಿದೆ.
ಪ್ರಕಾಶ ಶೆಡೇನೂರು ಎನ್ನುವ ಯುವ ರೈತ ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಟ್ರ್ಯಾಕ್ಟರ್ ಗೆ ರೋಟರ್ ಅಳವಡಿಸಿಕೊಂಡು ಉಳುಮೆ ಮಾಡುತ್ತಿದ್ದ ವೇಳೆ ಪ್ರಕಾಶ್ ಆಕಸ್ಮಿಕವಾಗಿ ರೋಟರ್ ಯಂತ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಗುತ್ತಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
