ರಾಯಚೂರು : ಮಗನ ಮದುವೆ ದಿನವೇ ಹೃದಯಾಘಾತದಿಂದ ತಂದೆ ಮೃತಪಟ್ಟ ರಾಯಚೂರಿನ ಸಿಂಧನೂರಿನಲ್ಲಿ ನಡೆದಿದೆ.
ಮೃತರನ್ನ 55 ವರ್ಷದ ಶರಣಯ್ಯಸ್ವಾಮಿ (55) ಎಂದು ಗುರುತಿಸಲಾಗಿದೆ.ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ನೆಂಟರಿಷ್ಟರು ಬಂದು ಸೇರಿದ್ದರು. ಇನ್ನೇನು ಮಗ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ 2 ಗಂಟೆಗಳ ಹಿಂದೆ ಶರಣಯ್ಯಸ್ವಾಮಿ ಮೃತಪಟ್ಟಿದ್ದಾರೆ. ಮಗನ ಮದುವೆಯನ್ನ ಕಣ್ತುಂಬಿಕೊಳ್ಳುವ ಆಸೆ ಈಡೇರದೇ ಶರಣಯ್ಯಸ್ವಾಮಿ ಮೃತಪಟ್ಟಿದ್ದಾನೆ.
ನವೆಂಬರ್ 30 ರಂದು ನಿನ್ನೆ ಈ ಘಟನೆ ನಡೆದಿದೆ. ಬೆಳಗ್ಗೆ 5 ಗಂಟೆಗೆ ಮಾಂಗಲ್ಯ ಧಾರಣೆಗೆ ಮುಹೂರ್ತ ಫಿಕ್ಸ್ ಆಗಿತ್ತು. ಆದರೆ ತಾಳಿ ಕಟ್ಟುವುದಕ್ಕೆ 2 ಗಂಟೆ ಬಾಕಿ ಇರುವಾಗಲೇ ಶರಣಯ್ಯಸ್ವಾಮಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಂಭ್ರಮದಲ್ಲಿ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಮದುವೆ ಮನೆಗೆ ಬಂದಿದ್ದ ಸಂಬಂಧಕರು ಶರಣಯ್ಯಸ್ವಾಮಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.
