ಯುವತಿಯ ಹೃದಯ ಕಸಿಗೆ 15 ಲಕ್ಷ ರೂ. ಕೊಟ್ಟು ಹೃದಯವಂತಿಕೆ ತೋರಿದ ನಟ ಅಕ್ಷಯ್​ ಕುಮಾರ್​

ಸಾಮಾಜಿಕ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಬಹಳಷ್ಟು ಹೆಸರು ಮಾಡುತ್ತಿರುವ ನಟ ಅಕ್ಷಯ್​ ಕುಮಾರ್​ ಆಯುಷಿ ಶರ್ಮಾ ಎಂಬ 25 ವರ್ಷದ ದೆಹಲಿ ಯುವತಿಯ ಹೃದಯ ಕಸಿಗಾಗಿ 15 ಲಕ್ಷ ರೂ. ನೀಡಿದ್ದಾರೆ.

ಈ ಕುರಿತು ಯುವಕನ ಅಜ್ಜ ಯೋಗೇಂದ್ರ ಅರುಣ್ ಮಾಹಿತಿ ನೀಡಿದ್ದಾರೆ. “ಆಯುಷಿ ಹುಟ್ಟಿದಾಗಿನಿಂದ ಹೃದಯ ದೋಷ ಉಂಟಾಗಿತ್ತು. ಈಕೆಗೆ ಈಗ 25 ವರ್ಷ ವಯಸ್ಸು. ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಯ ವೈದ್ಯರು ಆಕೆಯ ಹೃದಯ ಕೇವಲ 25 ಪ್ರತಿಶತದಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದರು. ಹೃದಯ ಕಸಿ ನಮಗೆ ಉಳಿದಿರುವ ಏಕೈಕ ಆಯ್ಕೆಯಾಗಿತ್ತು. ನಂತರ ನಟ ಅಕ್ಷಯ್​ ಕುಮಾರ್​ ಅವರು ದೇವರಂತೆ ಬಂದು ನಮಗೆ ಸಹಾಯ ಮಾಡಿದ್ದಾರೆ. ಇದರಿಂದ ಹೃದಯ ಕಸಿಯನ್ನು ಮಾಡಲು ಸಾಧ್ಯವಾಗಿದೆ ಎಂದಿದ್ದಾರೆ.

ಯೋಗೇಂದ್ರ ಅರುಣ್ ಅವರು 82 ವರ್ಷದ ನಿವೃತ್ತ ಪ್ರಾಂಶುಪಾಲರಾಗಿದ್ದು, ಆಯುಷಿಯ ಚಿಕಿತ್ಸೆಯ ಒಟ್ಟು ವೆಚ್ಚ 50 ಲಕ್ಷ ರೂ. ಅಗತ್ಯವಿದೆ. ನಟ ಅಕ್ಷಯ್​ ಕುಮಾರ್​ ಅಗತ್ಯವಿದ್ದರೆ ಹೆಚ್ಚಿನ ಹಣವನ್ನು ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಇದು ಈಗಾಗಲೇ ಯುವತಿ ಮತ್ತು ಅವರ ಕುಟುಂಬಕ್ಕೆ ಹೊಸ ಭರವಸೆಯನ್ನು ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read