ಸತತ 8 ಸಿಕ್ಸರ್ ಸಹಿತ ಕೇವಲ 11 ಎಸೆತಗಳಲ್ಲಿ ಅಜೇಯ 50 ರನ್…! ಅತಿ ವೇಗದ ಅರ್ಧಶತಕ ಬಾರಿಸಿ ವಿಶ್ವ ದಾಖಲೆಗೆ ಭಾಜನರಾದ ಆಕಾಶ್ ಚೌಧರಿ

ಸೂರತ್: ಸೂರತ್ ನ ಸಿ.ಕೆ. ಪಿತಾವಾಲಾ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಮೇಘಾಲಯದ ಯುವ ಆಟಗಾರ ಆಕಾಶ್ ಕುಮಾರ್ ಚೌಧರಿ ಕೇವಲ 11 ಎಸೆತಗಳಲ್ಲಿ 50 ರನ್ ಗಳಿಸಿದ್ದಾರೆ.

ಈ ಮೂಲಕ ಅವರು ಈ ಮಾದರಿಯ ಕ್ರಿಕೆಟ್ ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿ ವಿಶ್ವ ದಾಖಲೆಗೆ ಭಾಜನರಾಗಿದ್ದಾರೆ. ಹಾಗೆಯೇ ಆಕಾಶ್ ಕುಮಾರ್ ಚೌಧರಿ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಸತತ 8 ಸಿಕ್ಸರ್ ಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

2012ರಲ್ಲಿ ಎಸೆಕ್ಸ್ ತಂಡದ ವಿರುದ್ಧ 12 ಎಸೆತಗಳಲ್ಲಿ ಲೀಸೆಸ್ಟರ್ ಶೈರ್ ನ ವೇಯ್ನ್ ವೈಟ್ ನಿರ್ಮಿಸಿದ ಪ್ರಥಮ ದರ್ಜೆ ಕ್ರಿಕೆಟ್ ನ ಅತಿ ವೇಗದ ಅರ್ಧಶತಕದ ದಾಖಲೆಯನ್ನು ಆಕಾಶ್ ಚೌಧರಿ ಹಿಂದಿಕ್ಕಿದ್ದಾರೆ.

ಸೂರತ್ ಸಿ.ಕೆ. ಪಿತಾವಾಲಾ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಪ್ಲೇಟ್ ಗುಂಪಿನ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದ ಎರಡನೇ ದಿನ ಆಕಾಶ್ ಅಪರೂಪದ ದಾಖಲೆ ಬರೆದಿದ್ದಾರೆ. 14 ಎಸೆತಗಳನ್ನು ಎದುರಿಸಿದ ಅವರು 50 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮೇಘಾಲಯ ಮೊದಲ ಇನಿಂಗ್ಸ್ ನಲ್ಲಿ ಆರು ವಿಕೆಟ್ ನಷ್ಟಕ್ಕೆ 628 ರನ್ ಗಳಿಸಿ ಡಿಕ್ಲೇರ್ ಘೋಷಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read