ಬಿರುಕು ಸರಿಪಡಿಸಿಕೊಂಡು ಒಂದಾದ್ರಾ ಐಶ್ವರ್ಯ- ಅಭಿಷೇಕ್ ಬಚ್ಚನ್; ಅನುಮಾನಕ್ಕೆ ಕಾರಣವಾಯ್ತು ಉಂಗುರ….!

ನಟಿ ಐಶ್ವರ್ಯಾ ರೈ ಮತ್ತು ನಟ ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎಂಬ ಮಾತುಗಳು ಕೇಳಿಬರುತ್ತಲೇ ಇವೆ. ಅನಂತ್ ಅಂಬಾನಿ-ರಾಧಿಕಾ ಮದುವೆಗೆ ಐಶ್ವರ್ಯಾ ಮತ್ತು ಅವರ ಮಗಳು ಆರಾಧ್ಯ ಬಚ್ಚನ್, ಕುಟುಂಬದ ಜೊತೆಗೆ ಬರದೇ ಪ್ರತ್ಯೇಕವಾಗಿ ಆಗಮಿಸಿದ್ದರಿಂದ ಇಬ್ಬರ ನಡುವಿನ ಸಂಬಂಧವು ಈಗಾಗಲೇ ಹದಗೆಟ್ಟಿದೆ ಎಂದು ಭಾವಿಸಲಾಗಿತ್ತು. ಆದರೆ ಇದೀಗ ಐಶ್ವರ್ಯ ರೈ ಬೆರಳಲ್ಲಿ ಕಂಡ ಉಂಗುರದಿಂದ ಅವರ ಅಭಿಮಾನಿಗಳು ಐಶ್ವರ್ಯ ಮತ್ತು ಅಭಿಷೇಕ್ ಬಚ್ಚನ್ ಒಟ್ಟಿಗೆ ಇದ್ದಾರೆ. ಸದ್ಯ ಇಬ್ಬರೂ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರಲ್ಲಾ ಎಂದು ಹೇಳುತ್ತಿದ್ದಾರೆ.

ಇತ್ತೀಚಿನ ವೀಡಿಯೊವೊಂದರಲ್ಲಿ ಪ್ಯಾರಿಸ್‌ನಲ್ಲಿ ಲೋರಿಯಲ್ ಪ್ಯಾರಿಸ್ ಫ್ಯಾಶನ್ ವೀಕ್ 2024 ರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿರುವಾಗ ಐಶ್ವರ್ಯಾ ರೈ ತನ್ನ ಉಂಗುರದ ಬೆರಳಿನಲ್ಲಿ ಉಂಗುರವೊಂದನ್ನ ಹಾಕಿದ್ದಾರೆ. ಇದು ಅವರ ಮದುವೆ ಉಂಗುರವಾಗಿದ್ದು ಐಶ್ವರ್ಯಾ ಮತ್ತು ಅವರ ಪತಿ ಅಭಿಷೇಕ್ ಬಚ್ಚನ್ ನಡುವಿನ ಸಂಬಂಧ ಸರಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.

ಇಷ್ಟು ದಿನಗಳ ನಂತರ ಐಶ್ವರ್ಯಾ ಅವರ ಬೆರಳಲ್ಲಿ ಉಂಗುರ ನೋಡಿದ ಜನ ಈ ನಡೆಯನ್ನು ಉತ್ತಮ ಸಂಕೇತವೆಂದು ಹೇಳಿದ್ದಾರೆ. ದಂಪತಿ ಅಂತಿಮವಾಗಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಂಡಿದ್ದಾರೆಂದು ನಂಬಿದ್ದಾರೆ.

ಆದಾಗ್ಯೂ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಅದನ್ನು ಒಪ್ಪಿಕೊಳ್ಳುತ್ತಿಲ್ಲ. ಏಕೆಂದರೆ ಐಶ್ವರ್ಯಾ ಅವರ ಬೆರಳಿನ ಉಂಗುರವು ಮದುವೆಯ ಉಂಗುರವಲ್ಲ, ಆದರೆ ವಿವಾಹಿತ ಮಹಿಳೆಯರು, ಮುಖ್ಯವಾಗಿ ಮಂಗಳೂರಿಗರು ಧರಿಸಿರುವ ಸಂಸ್ಕೃತಿ ಪ್ರತಿಬಿಂಬದ ಉಂಗುರ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read