ಮುಂಬೈ: ಅಹಮದಾಬಾದ್ ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತರ 166 ಮಂದಿ ಕುಟುಂಬದವರಿಗೆ ತಲಾ 25 ಲಕ್ಷ ರೂ. ಮಧ್ಯಂತ ಪರಿಹಾರ ವಿತರಿಸಲಾಗಿದೆ.
ಮಧ್ಯಂತರ ಪರಿಹಾರವನ್ನು ಏರ್ ಲೈನ್ ವಿಮೆ ವತಿಯಿಂದ ನೀಡಲಾಗಿದ್ದು, ವಿಮಾನದಲ್ಲಿದ್ದ 147 ಪ್ರಯಾಣಿಕರು ಮತ್ತು ಇತರೆ 19 ಮಂದಿ ಕುಟುಂಬದವರಿಗೆ ನೀಡಲಾಗಿದೆ.
ದುರಂತದಲ್ಲಿ ಮೃತಪಟ್ಟ ಏರ್ ಇಂಡಿಯಾ ವಿಮಾನದ 12 ಸಿಬ್ಬಂದಿಗೆ ಪ್ರತ್ಯೇಕವಾಗಿ ವಿಮೆ ನೀಡಲಾಗುವುದು. ಇದರ ಬಗ್ಗೆ ಈಗಾಗಲೇ ಲೆಕ್ಕಾಚಾರ ಆರಂಭವಾಗಿದ್ದು, ಇದಕ್ಕೆ ಸಂಬಂಧಿತ ಹೆಚ್ಚುವರಿ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಮೃತಪಟ್ಟ ಎಲ್ಲಾ ಪ್ರಯಾಣಿಕರಿಗೆ 25 ಲಕ್ಷ ರೂ. ಪ್ರಾಥಮಿಕ ಪರಿಹಾರ ಒಂದೇ ಮೊತ್ತದ ಪರಿಹಾರವಾಗಿದೆ. ನಂತರ ಅಂತಿಮವಾಗಿ ನೀಡಲಾಗುವ ಪರಿಹಾರದ ಮೊತ್ತದಲ್ಲಿ ವ್ಯತ್ಯಾಸವಾಗಲಿದೆ. ಉಳಿದಂತೆ ಮೃತಪಟ್ಟವರ 166 ಕುಟುಂಬಗಳ ದಾಖಲೆ ಪರಿಶೀಲಿಸಲಾಗಿದ್ದು, ಇನ್ನೂ ಕೆಲವು ದಾಖಲೆಗಳು ಪರಿಶೀಲನೆ ಹಂತದಲ್ಲಿ ಇವೆ. ಎಲ್ಲರಿಗೂ ಮುಂದಿನವಾರ ಅಂತಿಮ ಪರಿಹಾರ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.