ವಿದ್ಯಾರ್ಥಿನಿ ಅಪಹರಿಸಿ ಕೊಲೆ, ಸ್ನೇಹಿತ ಸೇರಿ ಇಬ್ಬರು ಅರೆಸ್ಟ್

ಅಹ್ಮದ್ ನಗರ: ಪುಣೆಯ 22 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಭಾನುವಾರ ಅಹ್ಮದ್‌ನಗರದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮಾರ್ಚ್ 30 ರಿಂದ ಆಕೆ ನಾಪತ್ತೆಯಾಗಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಸುಲಿಗೆಗಾಗಿ ಕಾಲೇಜು ಸ್ನೇಹಿತ ಸೇರಿದಂತೆ ಮೂವರು ಆಕೆಯನ್ನು ಅಪಹರಿಸಿ ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ಹುಡುಗಿ ಪುಣೆಯ ವಘೋಲಿ ಪ್ರದೇಶದ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಳು. ಮಾರ್ಚ್ 29 ರಂದು ಕಾಲೇಜಿನ ಸ್ನೇಹಿತ ಮತ್ತು ಇಬ್ಬರು ಅವಳನ್ನು ಭೇಟಿಯಾಗಿದ್ದು, ಅವಳನ್ನು ಹಾಸ್ಟೆಲ್‌ ಗೆ ಬಿಟ್ಟಿದ್ದಾರೆ. ಮಾರ್ಚ್ 30 ರಂದು ಅವಳನ್ನು ಅಹ್ಮದ್‌ ನಗರಕ್ಕೆ ಕರೆದೊಯ್ದರು.

ನಂತರ ಅವರು ಆಕೆಯನ್ನು ಅಪಹರಿಸಿದ್ದಾಗಿ ಹೇಳಿ ಬಿಡುಗಡೆ ಮಾಡಲು ಪೋಷಕರಿಂದ 9 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಅವಳ ಕತ್ತು ಹಿಸುಕಿ ಕೊಲೆ ಮಾಡಿ ಅಹಮದ್‌ನಗರದ ಹೊರವಲಯದಲ್ಲಿ ಆಕೆಯ ಶವವನ್ನು ಹೂತುಹಾಕಿದರು. ಆಕೆಯ ಸೆಲ್‌ ಫೋನ್‌ ನ ಸಿಮ್ ತೆಗೆದಿದ್ದಾರೆ.

ಆಕೆಯ ಸಂಬಂಧಿಕರು ನಾಪತ್ತೆ ದೂರು ನೀಡಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತಾಂತ್ರಿಕ ವಿಶ್ಲೇಷಣೆಯ ಮೂಲಕ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳ ವಿಚಾರಣೆ ನಡೆಸಿದ್ದು, ನಂತರ ಸ್ನೇಹಿತ ಸೇರಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read