ಲೈಂಗಿಕ ಕಿರುಕುಳ ನೀಡಿದವನಿಗೆ ಸೋದರಿಯರೇ ತಕ್ಕ ಪಾಠ ಕಲಿಸಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋವೊಂದರಲ್ಲಿ ಶಾಲಾ ಬಾಲಕಿ ತನ್ನ ಸಹೋದರಿಯೊಂದಿಗೆ ಸೇರಿ ಕಿರುಕುಳ ನೀಡಿದವನಿಗೆ ಥಳಿಸಿ ಬುದ್ಧಿ ಕಲಿಸಿದ್ದಾಳೆ.
ಇತರ ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಹಾಯ ಪಡೆದು ಇಬ್ಬರೂ ವ್ಯಕ್ತಿಯನ್ನು ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮತ್ತೊಂದೆಡೆ ಥಳಿಕಕ್ಕೊಳಗಾದ ವ್ಯಕ್ತಿ ಎದ್ದು ನಿಲ್ಲಲು ಸಾಧ್ಯವಾಗದೇ ರಸ್ತೆಯಲ್ಲಿ ಒದ್ದಾಡುತ್ತಿದ್ದಾನೆ.
ಕಗ್ಡಾಪಿತ್ ಪೊಲೀಸರ ಎಫ್‌ಐಆರ್ ಪ್ರಕಾರ ಬಾಲಕಿಯ ತಾಯಿಯ ಹೇಳಿಕೆಯಂತೆ , ”ಗುರುವಾರ ಬೆಳಗ್ಗೆ 6.45ಕ್ಕೆ ನನ್ನ ಕಿರಿಯ ಮಗಳು ಸೈಕಲ್ ನಲ್ಲಿ ಶಾಲೆಗೆ ಹೋಗುತ್ತಿದ್ದಾಗ ವಿಜಯ್ ಸರ್ಕಾಟೆ ಬಲವಂತವಾಗಿ ಆಕೆಯ ಕೈ ಹಿಡಿದು ಉಡುಗೊರೆ ನೀಡಲು ಯತ್ನಿಸಿದ್ದಾನೆ. ಆಕೆ ಅದನ್ನು ಸ್ವೀಕರಿಸಲು ನಿರಾಕರಿಸಿದಾಗ, ಉಡುಗೊರೆಯನ್ನು ಆಕೆಯ ಬ್ಯಾಗ್‌ನಲ್ಲಿ ಇಟ್ಟು ಬಲವಂತವಾಗಿ ಚುಂಬಿಸಿ ಕಿರುಕುಳ ನೀಡಿದ್ದಾನೆ. ನನ್ನ ಮಗಳು ಮನೆಗೆ ಹಿಂತಿರುಗಿ ತುಂಬಾ ಅಳುತ್ತಾ ಇದನ್ನು ಬಹಿರಂಗಪಡಿಸಿದಳು ”ಎಂದು ವಿವರಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಮತ್ತೆ ವಿಜಯ್ ಸರ್ಕಾಟೆ ಕಿರಿಯ ಮಗಳನ್ನು ಅಡ್ಡಹಾಕಿ ಆಕೆಯ ಕೈ ಹಿಡಿದುಕೊಂಡ. ಆದರೆ ಈ ವೇಳೆ ಹಿರಿಯ ಮಗಳು ಹತ್ತಿರವೇ ಕಾಯುತ್ತಿದ್ದು ಸ್ಥಳಕ್ಕೆ ಧಾವಿಸಿದ ನಂತರ ಅವರಿಬ್ಬರು ಆತನನ್ನು ಥಳಿಸಲು ಶುರುಮಾಡಿದರು. ಇತರ ಶಾಲಾ ವಿದ್ಯಾರ್ಥಿಗಳು ಮತ್ತು ಕೆಲವು ದಾರಿಹೋಕರು ಸಹ ಆರೋಪಿಯನ್ನು ಥಳಿಸಿದರು ಎಂದು ಬಾಲಕಿಯರ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
https://twitter.com/sanjanausd08/status/1672535808446971910?ref_src=twsrc%5Etfw%7Ctwcamp%5Etweetembed%7Ctwterm%5E1672535808446971910%7Ctwgr%5E6e42947a808465c82c11d0ab6b4d070f9b7c4f34%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Fahmedabadteenagesistersbeatmolesterinpublicvideogoesviral-newsid-n512585902