ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ನಿರೂಪಿಸಿದ್ದಾರೆ 98 ವರ್ಷದ ವೃದ್ಧ….!

ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಅನೇಕರು ಸಾಧಿಸಿ ತೋರಿಸಿದ್ದಾರೆ. ಇಂಥವರ ಬಗ್ಗೆ ನೀವು ಸ್ಪೂರ್ತಿದಾಯಕ ಕಥೆಗಳನ್ನು ಕೇಳಿರಬಹುದು. ಇದೀಗ ಸಾಧಿಸಲು ವಯಸ್ಸಿನ ಹಂಗಿಲ್ಲ ಎಂಬುದನ್ನು 98 ವರ್ಷದ ವೃದ್ಧರೊಬ್ಬರು ಪ್ರೂವ್ ಮಾಡಿದ್ದಾರೆ.

ಅಮೆರಿಕದ 98 ವರ್ಷದ ವೃದ್ಧರೊಬ್ಬರು ವಾರದ ಏಳು ದಿನ ಕೆಲಸ ಮಾಡುವ ಮಾಡುವ ಮೂಲಕ ಕೆಲಸದಲ್ಲಿ ತಮ್ಮ ಬದ್ಧತೆಯನ್ನು ತೋರಿಸಿದ್ದಾರೆ. ಜೋ ಗ್ರಿಯರ್ ಎಂಬುವವರು ಚಿಕಾಗೋ ಮೂಲದ ಉತ್ಪಾದನಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಅವರು ಟ್ರೋಫಿಗಳು ಮತ್ತು ಪ್ರಶಸ್ತಿಗಳಿಗಾಗಿ ಅಚ್ಚುಗಳನ್ನು ರಚಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಜೋ ಅವರ ಕಥೆಯು ಇದೀಗ ನೆಟ್ಟಿಗರ ಗಮನಸೆಳೆದಿದೆ.

ಹೌದು, ಜೋ ಗ್ರಿಯರ್ ಎಂಬ 98 ವರ್ಷದ ವೃದ್ಧ ತಮ್ಮ ಕೆಲಸದಲ್ಲಿ ನಿಷ್ಠೆಯನ್ನು ಮೆರೆದಿದ್ದಾರೆ. ಪ್ರತಿದಿನ, ಅವರು ವಿವಿಧ ಟ್ರೋಫಿಗಳು ಮತ್ತು ಪ್ರಶಸ್ತಿಗಳಿಗಾಗಿ ಅಚ್ಚುಗಳನ್ನು ರಚಿಸುತ್ತಾರೆ. ಅಲ್ಲದೆ ಒಂದು ದಿನವೂ ರಜೆಯನ್ನು ಪಡೆಯದೆ ಕೆಲಸ ನಿರ್ವಹಿಸುತ್ತಾರೆ. ಇದು ತನಗೆ ಸಂತೋಷವನ್ನು ನೀಡುತ್ತದೆ ಎಂದು ಅವರು ಹೇಳಿದ್ರು. ಕಂಪನಿಯ ಅಧ್ಯಕ್ಷ ಎರಿಕ್ ಪ್ರೈಸ್‌ಮನ್ ಅವರು ಗ್ರಿಯರ್ ಅವರ ಅಚಲವಾದ ಸಮರ್ಪಣೆಯನ್ನು ಶ್ಲಾಘಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read