ಚಲಿಸುತ್ತಿರುವ ಬೈಕ್​ನಲ್ಲಿ ರೊಮಾನ್ಸ್; ರೆಡ್‌ ಹ್ಯಾಂಡಾಗಿ ಕ್ಯಾಮರಾದಲ್ಲಿ ಸೆರೆ

ರಾಜಸ್ಥಾನದ ಅಜ್ಮೀರ್‌ನಲ್ಲಿ ಬೈಕ್ ಓಡಿಸುವಾಗ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯೊಂದಿಗೆ ರೊಮಾನ್ಸ್​ನಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ.

ದ್ವಿಚಕ್ರ ವಾಹನ ಚಲಿಸುತ್ತಿರುವಾಗಲೇ ಇಬ್ಬರೂ ಮುಖಾಮುಖಿಯಾಗಿ ಕುಳಿತಿರುವುದನ್ನು ಕಾಣಬಹುದು. ಯುವಕ ಬೈಕ್ ಓಡಿಸುತ್ತಿದ್ದರೆ, ಯುವತಿ ಅವನ ಮುಂದೆ ಕುಳಿತು ಅವನನ್ನು ತಬ್ಬಿಕೊಳ್ಳುತ್ತಾಳೆ. ಹಿಂದೆ ವಾಹನದಲ್ಲಿದ್ದವರು ವಿಡಿಯೋ ಸೆರೆ ಹಿಡಿದಿದ್ದಾರೆ.

“ಅಜ್ಮೀರ್‌ನ ಪುಷ್ಕರ್ ರಸ್ತೆಯಲ್ಲಿ ಬೈಕ್‌ನಲ್ಲಿ ಆಶಿಕಿ” ಎಂದು ವೀಡಿಯೊದೊಂದಿಗೆ ಪೋಸ್ಟ್ ಮಾಡಲಾದ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಕೂಡಲೇ, ಅಜ್ಮೀರ್‌ನ ಕ್ರಿಶ್ಚಿಯನ್ ಗಂಜ್ ಪೊಲೀಸ್ ಠಾಣೆ ಪೊಲೀಸರು ಸವಾರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಕ್ಲಿಪ್‌ನಲ್ಲಿ ಕಂಡುಬಂದ ಬೈಕನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಚಲಿಸುವ ಬೈಕ್‌ನಲ್ಲಿ ದಂಪತಿಗಳು ಸಾಹಸ ಪ್ರದರ್ಶಿಸುತ್ತಿರುವ ವೀಡಿಯೊ ಬಳಿಕ  ಹಿರಿಯ ಅಧಿಕಾರಿಗಳಿಂದ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದೆ.

ಅದರಂತೆ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಸವಾರ ಸಾಹಿಲ್‌ಗಾಗಿ ಶೋಧ ನಡೆಸಲಾಯಿತು. ಸಾಹಿಲ್ ಅಜ್ಮೀರ್‌ನ ಪ್ರೇಮ್ ಸಾಗರ್ ರಸ್ತೆಯಲ್ಲಿ ವಾಸಿಸುತ್ತಿದ್ದಾನೆ.

https://twitter.com/JyotiSh61024918/status/1622824113713848320?ref_src=twsrc%5Etfw%7Ctwcamp%5Etweetembed%7Ctwterm%5E1622824113713848320%7Ctwgr%5Ed0c72e0fb9441b272c135f7507e16525d264132a%7Ctwcon%5Es1_&ref_url=https%3A%2F%2Fwww.news18.com%2Fbuzz%2Fafter-video-of-couples-pda-on-moving-bike-ajmer-police-registers-case-7030117.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read