ತೇಜಸ್ ಸಿನಿಮಾ ಸೋಲಿನ ಬಳಿಕ ಶ್ರೀ ಕೃಷ್ಣನ ದೇಗುಲಕ್ಕೆ ಭೇಟಿ ನೀಡಿದ ಕಂಗನಾ: ಹೃದಯ ಭಾರವಾಯಿತು ಎಂದಿದ್ದೇಕೆ ನಟಿ….?

ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ಇತ್ತೀಚೆಗೆ ಬಿಡುಗಡೆಯಾದ ತೇಜಸ್ ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವಂಥ ಹೆಸರು ಮಾಡಿಲ್ಲ. ಕಳೆದ ವಾರ ಬಿಡುಗಡೆಯಾದ ತಮ್ಮ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತ ಬಳಿಕ ನಟಿ ಇದೀಗ ದ್ವಾರಕಾಧೀಶ ದೇವಸ್ಥಾನಕ್ಕೆ ಭೇಟಿ ನೀಡಿದ್ರು.

ಗುರುವಾರ, ಕಂಗನಾ ರಣಾವತ್ ಅವರು ಗುಜರಾತ್‌ನ ದ್ವಾರಕಾಧೀಶ್ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋಗಳನ್ನು X ನಲ್ಲಿ ಹಂಚಿಕೊಂಡಿದ್ದಾರೆ.

ದ್ವಾರಕಾಧೀಶ ಅಥವಾ ದ್ವಾರಕಾ ರಾಜ ಎಂಬ ಹೆಸರಿನಿಂದ ಇಲ್ಲಿ ಪೂಜಿಸಲ್ಪಡುವ ಭಗವಂತ ಕೃಷ್ಣನಿಗೆ ಸಮರ್ಪಿತವಾಗಿರುವ ಬೋಟ್‌ನಿಂದ ಹಾಗೂ ದೇವಾಲಯದ ಒಳಗಿನ ಫೋಟೋಗಳನ್ನು ಕಂಗನಾ ಹಂಚಿಕೊಂಡಿದ್ದಾರೆ.

ಈ ದೇವಾಲಯವು ಗುಜರಾತ್‌ನ ದ್ವಾರಕಾ ನಗರದಲ್ಲಿದೆ. ಇದು ಚಾರ್ ಧಾಮ್‌ನ ತಾಣಗಳಲ್ಲಿ ಒಂದಾಗಿದೆ. ದೇವಾಲಯಕ್ಕೆ ಭೇಟಿ ನೀಡುವಾಗ ಕಂಗನಾ ಗೋಲ್ಡನ್ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ನಟಿ, ಕೆಲವು ದಿನಗಳಿಂದ ನನ್ನ ಹೃದಯವು ತುಂಬಾ ತೊಂದರೆಗೀಡಾಗಿತ್ತು ಎಂದು ಹಿಂದಿಯಲ್ಲಿ ಬರೆದಿದ್ದಾರೆ.

ನನಗೆ ದ್ವಾರಕಾದಿಗಳನ್ನು ಭೇಟಿ ಮಾಡಬೇಕು ಎಂದು ಅನಿಸಿತು. ಶ್ರೀಕೃಷ್ಣನ ಈ ದಿವ್ಯ ನಗರಿ ದ್ವಾರಕೆಗೆ ಬಂದ ಕೂಡಲೇ ಇಲ್ಲಿನ ಧೂಳನ್ನು ನೋಡಿದೊಡನೆಯೇ ನನ್ನ ಚಿಂತೆಗಳೆಲ್ಲ ಕಳಚಿ ಬಿದ್ದಂತೆ ಭಾಸವಾಯಿತು. ನನ್ನ ಮನಸ್ಸು ಸ್ಥಿರವಾಯಿತು. ಹಾಗೂ ನಾನು ಅನಂತ ಆನಂದವನ್ನು ಅನುಭವಿಸಿದೆ. ಓ ದ್ವಾರಕಾ ಪ್ರಭುವೇ, ನಿಮ್ಮ ಆಶೀರ್ವಾದ ಹೀಗೆ ಇರಲಿ (ಮಡಿಸಿದ ಕೈಗಳ ಎಮೋಜಿ). ಹರೇ ಕೃಷ್ಣ ಎಂದು ಬರೆದಿದ್ದಾರೆ.

https://twitter.com/KanganaTeam/status/1720092042934861967?ref_src=twsrc%5Etfw%7Ctwcamp%5Etweetembed%7Ctwterm%5E1720092042934861967%7Ctwgr%5E8ad7bb979548d59590a4bb9dd8df9708c9000246%7Ctwcon%5Es1_&ref_url=https%3A%2F%2Fwww.hindustantimes.com%2Fentertainment%2Fbollywood%2Fkangana-ranaut-dwarkadhish-temple-tejas-box-office-failure-101698980804462.html

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read