ರಸ್ತೆಯಲ್ಲೇ ಮೈಮರೆತ ಲವ್ ಬರ್ಡ್ಸ್: ಬೈಕ್ ರೊಮ್ಯಾನ್ಸ್ ನಂತ್ರ ಕಾರ್ ಸನ್ ರೂಫ್ ನಲ್ಲಿ ಯುವ ಜೋಡಿ ಪ್ರಣಯ ಪ್ರಸಂಗ ವಿಡಿಯೋ ವೈರಲ್

ವರ್ಷದ ಅತ್ಯಂತ ರೊಮ್ಯಾಂಟಿಕ್ ತಿಂಗಳು ಫೆಬ್ರವರಿಗೆ ಇನ್ನೂ ಒಂದು ವಾರವಿದೆ. ಹೀಗಿರುವಾಗಲೇ ಕೆಲವು ಪ್ರೇಮ ಪಕ್ಷಿಗಳು ಸಾರ್ವಜನಿಕವಾಗಿ ರೊಮ್ಯಾನ್ಸ್ ಮಾಡಿ ಸುದ್ದಿಯಾಗಿದ್ದಾರೆ.

ಲಕ್ನೋದಲ್ಲಿ ಜೋಡಿಯೊಂದು ಮುಖಾಮುಖಿಯಾಗಿ ತಬ್ಬಿಕೊಂದು ಬೈಕ್ ಚಾಲನೆ ಮಾಡಿದ ಕೆಲವು ದಿನಗಳ ನಂತರ, ‘ದಿ ಸಿಟಿ ಆಫ್ ನವಾಬ್ಸ್’ ನಲ್ಲಿ ಕಾರ್ ನ ಸನ್‌ ರೂಫ್ ತೆರೆದು ವ್ಯಕ್ತಿಯೊಬ್ಬ ಹುಡುಗಿಯೊಂದಿಗೆ ರೊಮ್ಯಾನ್ಸ್ ಮಾಡಿರುವ ಮತ್ತೊಂದು ವೀಡಿಯೊ ಕಾಣಿಸಿಕೊಂಡಿದೆ.

ದಾರಿಹೋಕರು ಚಿತ್ರೀಕರಿಸಿದ ವೀಡಿಯೊ ಇದೀಗ ವೈರಲ್ ಆಗಿದ್ದು, ಜೋಡಿ ಆಕ್ಷೇಪಾರ್ಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಜೋಡಿ ಮತ್ತು ಕಾರ್ ಗುರುತಿಸಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಳೆದ ವಾರ, ಲಕ್ನೋ ನಗರದಲ್ಲಿ ಯುವ ಜೋಡಿ ಬೈಕ್ ಓಡಿಸುವಾಗ ರೊಮ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿತ್ತು. 23 ವರ್ಷದ ವ್ಯಕ್ತಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಆದರೆ, ಹುಡುಗಿಯನ್ನು ಬಿಡಲಾಯಿತು.

https://twitter.com/Ratnesh_speaks/status/1617749306597052416

https://twitter.com/Siachaturvedi2/status/1615527360421593088

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read