Shocking: ಚುನಾವಣಾ ಸೋಲಿನ ನಂತರ ವಿದ್ಯಾರ್ಥಿನಿಯರಿಗೆ ʼಉಚಿತ ಬಸ್ ಸೇವೆʼ ಸ್ಥಗಿತ

ಹರಿಯಾಣದ ರೋಹ್ಟಕ್ ಜಿಲ್ಲೆಯ ಮೆಹಮ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ, ಮಾಜಿ ಶಾಸಕ ಬಾಲರಾಜ್ ಕುಂದು ತಮ್ಮ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿನಿಯರಿಗೆ ನೀಡಲಾಗಿದ್ದ ಉಚಿತ ಬಸ್ ಸೌಲಭ್ಯವನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ.

ಕುಂದು ನೇತೃತ್ವದಲ್ಲಿ ಬುಧವಾರ ನಡೆದ ಹರಿಯಾಣ ಜನಸೇವಕ್ ಪಕ್ಷದ (ಎಚ್‌ಜೆಪಿ) ಕಾರ್ಯಕರ್ತರ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

“ಪಕ್ಷದ ಕಾರ್ಯಕರ್ತರು ನಮ್ಮ ಬಸ್‌ಗಳನ್ನು ಬೇರೆ ಕ್ಷೇತ್ರಗಳಲ್ಲಿ ನಿಯೋಜಿಸಲು ಒತ್ತಾಯಿಸಿದ್ದರಿಂದ ಎರಡು ವರ್ಷಗಳ ಅವಧಿಗೆ ಉಚಿತ ಬಸ್ ಸೇವೆಯನ್ನು ಹಿಂಪಡೆಯಲಾಗಿದೆ. ಇದೀಗ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿ ಮೆಹಮ್ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್ ಅಭ್ಯರ್ಥಿ ಬಲರಾಮ್ ಡಾಂಗಿ ಅವರು ತಮ್ಮ ಬದ್ಧತೆಯನ್ನು ತೋರಿಸಬೇಕು ಮತ್ತು ರೋಹ್ಟಕ್ ಸಂಸದ ದೀಪೇಂದರ್ ಸಿಂಗ್ ಹೂಡಾ ಅವರೊಂದಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು, ”ಎಂದು ಕುಂದು ಹೇಳಿದರು.

ಮೆಹಮ್ ಕ್ಷೇತ್ರದ ವಿದ್ಯಾರ್ಥಿನಿಯರಿಗಾಗಿ ಕುಂದು ಸುಮಾರು 20 ಬಸ್‌ಗಳ ಸಮೂಹವನ್ನು ಹಲವಾರು ವರ್ಷಗಳಿಂದ ಉಚಿತವಾಗಿ ನಡೆಸುತ್ತಿದ್ದರು.

ಆದರೆ ಎರಡು ವರ್ಷಗಳ ನಂತರ ಕ್ಷೇತ್ರದಲ್ಲಿ ಬಸ್ ಸಂಚಾರ ಆರಂಭಿಸುವುದಾಗಿ ಘೋಷಿಸಿದ್ದರೂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಿಂದ ಸೋತ ಹಿನ್ನೆಲೆಯಲ್ಲಿ ಉಚಿತ ಬಸ್ ಸೇವೆ ನಿಲ್ಲಿಸಿದ್ದಾರೆ.

ಏತನ್ಮಧ್ಯೆ, ಇಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಕುಂದು ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ರೋಹ್ಟಕ್‌ನಿಂದ ಹಾಲಿ ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read