’ಹನುಮಂತ ದೇವರೇ ಅಲ್ಲ’: ಪೊಲೀಸ್ ಭದ್ರತೆ ಬಳಿಕ ’ಆದಿಪುರುಷ್’ ಡೈಲಾಗ್ ಬರಹಗಾರನ ಮತ್ತೊಂದು ಹೇಳಿಕೆ

ರಾಮಾಯಣವನ್ನು ಅವಹೇಳನಕಾರಿಯಾಗಿ ತೋರಿದ್ದಾರೆ ಎಂಬ ಆಪಾದನೆ ಮೇಲೆ ತೀವ್ರ ವಿವಾದಕ್ಕೆ ಕಾರಣವಾಗಿರುವ ’ಆದಿಪುರುಷ್’ ಸಿನೆಮಾದಲ್ಲಿ ಡೈಲಾಗ್‌ ಗಳನ್ನು ಬರೆದಿರುವ ಮನೋಜ್ ಮುಂತಾಸಿರ್‌ ತಮಗೆ ಜೀವ ಬೆದರಿಕೆ ಇರುವುದಾಗಿ ಹೇಳಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಮುಂಬೈ ಪೊಲೀಸ್ ಭದ್ರತೆ ಒದಗಿಸಿದೆ.

ಚಿತ್ರದಲ್ಲಿ ತಾವು ಬರೆದಿರುವ ಡೈಲಾಗ್‌ಗಳನ್ನು ಸಮರ್ಥಿಸಿಕೊಂಡಿರುವ ಮನೋಜ್, “ಭಜರಂಗ ಬಲಿ ದೇವರು ಅಲ್ಲ, ಭಕ್ತ. ಆತನ ಭಕ್ತಿಯಲ್ಲಿ ಅಗಾಧವಾದ ಶಕ್ತಿ ಇದ್ದ ಕಾರಣ ನಾವು ಆತನನ್ನು ಭಗವಂತನನ್ನಾಗಿ ಮಾಡಿಕೊಂಡಿದ್ದೇವೆ,” ಎಂದು ಹೇಳುವ ಮೂಲಕ ಮನೋಜ್ ಈಗ ತೀವ್ರ ಟೀಕೆಗೆ ಗ್ರಾಸವಾಗಿದ್ದಾರೆ.

“ಹನುಮಂತ ಶಿವನ ರುದ್ರಾವತಾರಿಯಾಗಿದ್ದಾನೆ ಎಂದು ಯಾರಾದರೂ ಈತನಿಗೆ ಸ್ವಲ್ಪ ವಿವರಿಸಿ ಹೇಳಿ,” ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದರೆ, “ಕಾಲುಬಾಯಿ ರೋಗದಿಂದ ನರಳುತ್ತಿರುವ ವ್ಯಕ್ತಿಯ ರೋಗಲಕ್ಷಣ ಇದಾಗಿದೆ,” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಸನಾತನ ಧರ್ಮಾನುಯಾಯಿಗಳಿಗೆ‌, ಎಡವಟ್ಟಿನ ವಿಎಫ್‌ಎಕ್ಸ್ ಹಾಗೂ ಡೈಲಾಗ್‌ಗಳಿಂದಾಗಿ ಭಾರೀ ಸಿಟ್ಟು ತರಿಸಿರುವ ಚಿತ್ರ ತಂಡ ಮನೋಜ್‌ರ ಈ ಹೇಳಿಕೆಯಿಂದ ಇನ್ನಷ್ಟು ಟೀಕೆಗೆ ಗ್ರಾಸವಾಗಿದೆ.

https://twitter.com/erbmjha/status/1670816677351809026?ref_src=twsrc%5Etfw%7Ctwcamp%5Etweetembed%7Ctwterm%5E1670816677351809026%7Ctwgr%5Ead1e18715b78e5b93bd25df813545182da2937a5%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fvideoaftermumbaipoliceprovidessecuritymanojmuntashirsayshanumanisnotgoddrawsire-newsid-n511067404

https://twitter.com/selfvision/status/1670859154452525056?ref_src=twsrc%5Etfw%7Ctwcamp%5Etweetembed%7Ctwterm%5E1670859154452525056%7Ctwgr%5Ead1e18715b78e5b93bd25df813545182da2937a5%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fvideoaftermumbaipoliceprovidessecuritymanojmuntashirsayshanumanisnotgoddrawsire-newsid-n511067404

https://twitter.com/zPopzz/status/1670849653351350272?ref_src=twsrc%5Etfw%7Ctwcamp%5Etweetembed%7Ctwterm%5E1670849653351350272%7Ctw

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read