ಮುನ್ನಾರ್‌ಗೆ ಬಂದಿದ್ದರಾ ಹಾಲಿವುಡ್‌ನ ಈ ತಾರಾ ದಂಪತಿ…..?

ಹಾಲಿವುಡ್ ತಾರಾ ದಂಪತಿ ಟಾಮ್ ಹಾಲೆಂಡ್ ಹಾಗೂ ಜ಼ೆಂಡಾಯಾ ಮುಂಬಯಿಯಲ್ಲಿ ಕಾಣಿಸಿಕೊಂಡ ನಂತರ ಇದೀಗ ಕೇರಳದ ಮುನ್ನಾರ್‌ನಲ್ಲಿ ಕೈ ಕೈ ಹಿಡಿದುಕೊಂಡು ಓಡಾಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲು ಈ ಇಬ್ಬರೂ ಮುಂಬಯಿಗೆ ಆಗಮಿಸಿದ್ದರು ಎಂದು ವದಂತಿಗಳಿವೆ. ಇದೇ ಸಮಾರಂಭದಲ್ಲಿ ಈ ತಾರಾ ದಂಪತಿ ಗಿಗಿ ಹ್ಯಾಡಿಡ್, ನಿಕ್ ಜೋನಾಸ್, ಪ್ರಿಯಾಂಕಾ ಚೋಪ್ರಾ ಜೋನಾಸ್ ಮತ್ತು ಶಾರುಖ್ ಖಾನ್‌ರಂಥ ಸೆಲೆಬ್ರಿಟಿಗಳ ನಡುವೆ ಕಾಣಿಸಿಕೊಂಡಿದ್ದಾರೆ.

ಕೇರಳ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಟ್ವಿಟರ್‌ ಖಾತೆಯು ಹಾಲೆಂಡ್ ಹಾಗೂ ಜ಼ೆಂಡಾಯಾ ಕೈ ಕೈ ಹಿಡಿದುಕೊಂಡು ಮುನ್ನಾರ್‌ನ ಚಹಾ ತೋಟದಲ್ಲಿ ಓಡಾಡುತ್ತಿರುವ ಚಿತ್ರವೊಂದನ್ನು ಶೇರ್‌ ಮಾಡಿದೆ. ಇದು ನಿಜವಾದ ಚಿತ್ರವೂ ಅಥವಾ ಏಪ್ರಿಲ್ ಫೂಲ್ ದಿನಕ್ಕೆಂದು ಮಾಡಿದ ಚೇಷ್ಟೆಯೋ ತಿಳಿದು ಬಂದಿಲ್ಲ.

ವಾಸ್ತವದಲ್ಲಿ, ಬೋಸ್ಟನ್‌ನಲ್ಲಿ ಶಾಪಿಂಗ್‌ ಡೇಟ್‌ನಲ್ಲಿದ್ದ ವೇಳೆ ತೆರೆಯಲಾದ ಈ ಚಿತ್ರವನ್ನು ಎಡಿಟ್ ಮಾಡಲಾಗಿದೆ.

“ಈ ಚಿತ್ರವನ್ನು ಫೋಟೋಶಾಪ್ ಮಾಡಿದವನಿಗೆ ಉತ್ತಮ ಭವಿಷ್ಯವಿದೆ,” ಎಂದು ನೆಟ್ಟಿಗರೊಬ್ಬರು ತಮಾಷೆ ಮಾಡಿದ್ದಾರೆ.

https://twitter.com/KeralaTourism/status/1642036584013766659?ref_src=twsrc%5Etfw%7Ctwcamp%5Etweetembed%7Ctwterm%5E1642036584013766659%7Ctwgr%5E9992b9ab83732f29d5ea87ca578b90e355282074%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fafter-mumbai-are-spiderman-co-stars-tom-holland-zendaya-in-munnar-kerala-tourism-shares-picture-on-april-fools-day

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read