ʼಮಿಸ್‌ ಇಂಡಿಯಾʼ ಫೈನಲಿಸ್ಟ್‌ನಿಂದ ಮೆಕ್‌ಡೊನಾಲ್ಡ್ಸ್‌ನಲ್ಲಿ ಪಾತ್ರೆ ತೊಳೆಯುವವರೆಗೆ: ಸ್ಮೃತಿ ಇರಾನಿ ಸ್ಫೂರ್ತಿದಾಯಕ ಕಥೆ | Watch

ಬಿಜೆಪಿ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಟೈಮ್ಸ್‌ ನೌ ಶೃಂಗಸಭೆಯಲ್ಲಿ ತಮ್ಮ ಜೀವನದ ರೋಚಕ ಪಯಣವನ್ನು ತೆರೆದಿಟ್ಟರು. 17 ವರ್ಷದವರಿದ್ದಾಗ ಜನ್‌ಪಥ್‌ನಲ್ಲಿ ದಿನಕ್ಕೆ 200 ರೂಪಾಯಿಗೆ ಕಾಸ್ಮೆಟಿಕ್ಸ್‌ ಮಾರುತ್ತಿದ್ದೆ. 18ನೇ ವಯಸ್ಸಿನಲ್ಲಿ ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡಿದೆ. ಪಾಲಂ ಏರ್‌ಪೋರ್ಟ್‌ನಿಂದ ದೆಹಲಿ ರೈಲ್ವೆ ಸ್ಟೇಷನ್‌ವರೆಗೆ, ನಂತರ ಗೋಲ್ಡಾ ಖಾನಾಕ್ಕೆ ಹೋಗಿ, ಈಸ್ಟ್‌ ಆಫ್‌ ಕೈಲಾಶ್‌ನಲ್ಲಿರುವ ಸಪ್ನಾ ಸಿನಿಮಾ ಮೇಲಿನ ರೂಮಿಗೆ ಬಂದು ರೋಸ್ಟರ್ ಬರೆಯುತ್ತಿದ್ದೆ ಎಂದು ಸ್ಮೃತಿ ಇರಾನಿ ನೆನಪಿಸಿಕೊಂಡರು.

19ನೇ ವಯಸ್ಸಿನಲ್ಲಿ ಲಾಜಿಸ್ಟಿಕ್ಸ್‌ ಕಂಪನಿಯ ಭಾಗವನ್ನು ಖರೀದಿಸಲು ಬಾಂಬೆಗೆ ಹೋದೆ. ಆದರೆ, ನನ್ನ ಬಳಿ ಹಣವಿರಲಿಲ್ಲ. 22ನೇ ವಯಸ್ಸಿನಲ್ಲಿ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲು ಹಣವನ್ನು ಸಾಲ ಮಾಡಬೇಕಾಯಿತು. ಮಿಸ್‌ ಇಂಡಿಯಾ ಫೈನಲಿಸ್ಟ್ ಆದ ನಂತರ ಕೆಲಸ ಸಿಗಲಿಲ್ಲ. ಹೀಗಾಗಿ, ಮೆಕ್‌ಡೊನಾಲ್ಡ್ಸ್‌ನಲ್ಲಿ ನೆಲ ಒರೆಸುವ, ಪಾತ್ರೆ ತೊಳೆಯುವ ಕೆಲಸ ಮಾಡಿದೆ. ಅದಕ್ಕೆ ಸಿಗುತ್ತಿದ್ದ ಸಂಬಳ ಕೇವಲ 1800 ರೂಪಾಯಿ ಎಂದು ಸ್ಮೃತಿ ಇರಾನಿ ಹೇಳಿದರು.

ಟೈಮ್ಸ್‌ ನೌ ಶೃಂಗಸಭೆಯಲ್ಲಿ ‘ಮಹಿಳಾ ಸಬಲೀಕರಣ: ಅತ್ಯಂತ ನಿರ್ಣಾಯಕ ಕ್ಷೇತ್ರ’ ಎಂಬ ವಿಷಯದ ಕುರಿತು ನಡೆದ ಚರ್ಚೆಯಲ್ಲಿ ಸ್ಮೃತಿ ಇರಾನಿ ಈ ಮಾತುಗಳನ್ನು ಹಂಚಿಕೊಂಡರು. ಟೈಮ್ಸ್‌ ನೆಟ್‌ವರ್ಕ್‌ ಆಯೋಜಿಸಿದ್ದ ಈ ಶೃಂಗಸಭೆಯಲ್ಲಿ ಅಮಿತ್‌ ಶಾ, ನಿತಿನ್‌ ಗಡ್ಕರಿ, ಪಿಯೂಷ್‌ ಗೋಯಲ್, ಬಿಲ್‌ ಗೇಟ್ಸ್‌, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read