ಅಮಿತಾಬ್ ಬಚ್ಛನ್ ಹಾಗೂ ಸಚಿನ್ ತೆಂಡೂಲ್ಕರ್ ಬಳಿಕ 2023ನೇ ಸಾಲಿನ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗಾಗಿ ತಲೈವಾ ರಜಿನಿಕಾಂತ್ರಿಗೆ ಗೋಲ್ಡನ್ ಟಿಕೆಟ್ ನೀಡಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಆಹ್ವಾನ ನೀಡಿದ್ದಾರೆ.
ವರ್ಚಸ್ಸಿನ ನಿಜವಾದ ಮೂರ್ತರೂಪ ಹಾಗೂ ಸಿನಿಮೀಯ ತೇಜಸ್ಸು ಆಗಿರುವ ನಟನಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟಿಕೆಟ್ ನೀಡಿದರು ಎಂದು ಎಕ್ಸ್ನಲ್ಲಿ ಈ ಫೋಟೋವನ್ನು ಶೇರ್ ಮಾಡಲಾಗಿದೆ. ಜಯ್ ಶಾ, ರಜನಿಕಾಂತ್ರಿಗೆ ಟಿಕೆಟ್ ನೀಡುತ್ತಿರೋದನ್ನು ಈ ಫೋಟೋದಲ್ಲಿ ಕಾಣಬಹುದಾಗಿದೆ.
ಅಮಿತಾಬ್ ಬಚ್ಛನ್ ಹಾಗೂ ಸಚಿನ್ ತೆಂಡೂಲ್ಕರ್ರಿಗೂ ಬಿಸಿಸಿಐ ಇದೇ ರೀತಿ ಗೌರವಪೂರ್ವಕವಾಗಿ ಗೋಲ್ಡನ್ ಟಿಕೆಟ್ ನೀಡಿ ಪಂದ್ಯಕ್ಕೆ ಆಹ್ವಾನಿಸಿದೆ. 2023 ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಅನ್ನು ಭಾರತವು ಅಕ್ಟೋಬರ್ 5 ರಿಂದ ನವೆಂಬರ್ 19, 2023 ರವರೆಗೆ ಆಯೋಜಿಸಲಿದೆ.
ಪಂದ್ಯಾವಳಿಯು ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ, ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ಸೇರಿದಂತೆ ಹತ್ತು ತಂಡಗಳನ್ನು ಒಳಗೊಂಡಿರುತ್ತದೆ.
https://twitter.com/BCCI/status/1704038875625095315?ref_src=twsrc%5Etfw%7Ctwcamp%5Etweetembed%7Ctwterm%5E1704038875625095315%7Ctwgr%5E3b4e3d35627760c6aa393f149917baae5d178885%7Ctwcon%5Es1_&ref_url=https%3A%2F%2Fsportstar.thehindu.com%2Fcricket%2Frajnikanth-odi-world-cup-golden-ticket-jay-shah-bcci-secretary%2Farticle67321978.ece