ಸತತ ಒಂದೇ ಸಂಖ್ಯೆಯ ಲಾಟರಿ ಖರೀದಿ: 10 ವರ್ಷಗಳ ಬಳಿಕ 41 ಲಕ್ಷ ರೂ. ಬಂಪರ್​

ಮೇರಿಲ್ಯಾಂಡ್: ಮೇರಿಲ್ಯಾಂಡ್ ಮೂಲದ ಅಮೇರಿಕನ್ ವ್ಯಕ್ತಿಯೊಬ್ಬರು ಲಾಟರಿಯಿಂದ ನಂಬಲಾಗದ 50 ಸಾವಿರ ಡಾಲರ್​ (ಸುಮಾರು 41 ಲಕ್ಷ ರೂಪಾಯಿ) ಬಹುಮಾನವನ್ನು ಗೆದ್ದಿದ್ದಾರೆ. ಕುತೂಹಲಕಾರಿಯಾಗಿ, ಸುಮಾರು ಒಂದು ದಶಕದ ಕಾಲ ಒಂದೇ ಸಂಖ್ಯೆಯ ಲಾಟರಿಯ ಜೊತೆ ಆಟವಾಡಿದ ಬಳಿಕ ಈ ದೊಡ್ಡ ಬಹುಮಾನವನ್ನು ಪಡೆದ್ದಿದ್ದಾರೆ.

ಈ ಅದೃಷ್ಟಶಾಲಿ ವ್ಯಕ್ತಿ ಕಳೆದ 10 ವರ್ಷಗಳಿಂದ ಪ್ರತಿ ಬಾರಿಯೂ ಒಂದೇ ಸಂಖ್ಯೆಗಳೊಂದಿಗೆ ಆಡುತ್ತಿದ್ದರು ಎನ್ನಲಾಗಿದೆ. “ನಾನು ಎಲ್ಲಾ ಸಮಯದಲ್ಲೂ ಒಂದೇ ಸಂಖ್ಯೆಗಳನ್ನು ಆಡುತ್ತಿದ್ದು, ಇದು ನನ್ನ ಅದೃಷ್ಟ ಖುಲಾಯಿಸಿದೆ ಎಂದಿದ್ದಾರೆ.

ಟೆಂಪಲ್ ಹಿಲ್ಸ್‌ನ ಐವರ್ಸನ್ ಸ್ಟ್ರೀಟ್‌ನಲ್ಲಿರುವ ಮಾಡರ್ನ್ ಲಿಕ್ಕರ್ಸ್‌ನಲ್ಲಿ ಮೇ 28 ರಂದು ಬೋನಸ್ ಮ್ಯಾಚ್ 5 ಲಾಟರಿ ಟಿಕೆಟ್​ ಖರೀದಿಸಿದ್ದರು. ಇದಕ್ಕಾಗಿ ಅವರು ನಾಲ್ಕು ಡಾಲರ್​ ನೀಡಿದ್ದರು. ಆ ಅದೃಷ್ಟದ ಸಂಖ್ಯೆಗಳನ್ನು ಡ್ರಾ ಮಾಡಲಾಗಿದ್ದು, ಅವರಿಗೆ $50,000 ಬಹುಮಾನ ದೊರೆಯಿತು. ಒಂದಲ್ಲ ಒಂದು ದಿನ ಈ ನಂಬರ್​ ನನ್ನ ಅದೃಷ್ಟವನ್ನು ಖುಲಾಯಿಸುತ್ತದೆ ಎಂದು ತಿಳಿದಿತ್ತು. ಅದಕ್ಕಾಗಿ 10 ವರ್ಷ ಕಾಯಬೇಕಾಗಿತು. ತಡವಾದರೂ ಪರವಾಗಿಲ್ಲ. ಬೃಹತ್​ ಮೊತ್ತ ಗೆದ್ದಿದ್ದೇನೆ ಎಂದಿದ್ದಾನೆ ಈತ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read