ದೊಡ್ಡಮ್ಮನ ಮಗನೊಂದಿಗೆ ಅಕ್ರಮ ಸಂಬಂಧ ಬೆಳೆಸಿ ದಾರಿ ತಪ್ಪಿದ ಮಹಿಳೆಯಿಂದ ಘೋರ ಕೃತ್ಯ: ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಪತಿ ಕೊಲೆ ರಹಸ್ಯ

ತುಮಕೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಹತ್ಯೆಗೆ ಪತ್ನಿಯೇ ಸುಪಾರಿ ನೀಡಿದ್ದ ಪ್ರಕರಣ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಮೂವರನ್ನು ಬಂಧಿಸಲಾಗಿದೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಿತ್ನಮಂಗಲ ಕೆರೆಯಲ್ಲಿ ಫೆಬ್ರವರಿ 4 ರಂದು ಮಂಜುನಾಥ್ ಎಂಬುವರ ಶವ ಪತ್ತೆಯಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಸ್ವತಃ ದೊಡ್ಡಮ್ಮನ ಮಗನೊಂದಿಗೆ ಆಕ್ರಮ ಸಂಬಂಧ ಬೆಳೆಸಿದ್ದ ಮಂಜುನಾಥನ ಪತ್ನಿಯೇ ಸುಪಾರಿ ನೀಡಿ ಪತಿಯನ್ನು ಕೊಲೆ ಮಾಡಿಸಿರುವುದು ಬೆಳಕಿಗೆ ಬಂದಿದೆ.

ಹರ್ಷಿತಾ, ರಘು, ರವಿಕಿರಣ್ ಬಂಧಿ ಆರೋಪಿಗಳು. ಸೀನಪ್ಪನಹಳ್ಳಿ ನಿವಾಸಿ ಮಂಜುನಾಥ್ ಫೆಬ್ರವರಿ 3 ರಂದು ಹುಟ್ಟುಹಬ್ಬ ಆಚರಿಸಿಕೊಂಡು ಮನೆಗೆ ಬಂದಿದ್ದ. ಫೋನ್ ಕರೆ ಬಂದ ಕಾರಣ ಮನೆಯಿಂದ ಹೊರಗೆ ಹೋಗಿದ್ದ ಆತನನ್ನು ಬರ್ಬರವಾಗಿ ಕೊಲೆ ಮಾಡಿ ಮೃತದೇಹವನ್ನು ಕೆರೆಗೆ ಎಸೆಯಲಾಗಿದೆ.

ಮಂಜುನಾಥನ ಪತ್ನಿ ಹರ್ಷಿತಾ ಕೊಲೆಗೆ ಸುಪಾರಿ ನೀಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ತನ್ನ ದೊಡ್ಡಮ್ಮನ ಮಗ ರಘು ಮತ್ತು ರವಿಕಿರಣ್ ಗೆ ಹರ್ಷಿತಾ 7 ಲಕ್ಷ ರೂಪಾಯಿ ಸುಪಾರಿ ನೀಡಿದ್ದು, 7 ಜನ ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಕೆಯಲ್ಲಿ ಗೊತ್ತಾಗಿದೆ. ಮೂವರನ್ನು ಬಂಧಿಸಲಾಗಿದೆ. ಹರ್ಷಿತಾ ದೊಡ್ಡಮ್ಮನ ಮಕ್ಕಳದ ರಘು ಮತ್ತು ರವಿಕಿರಣ್ ಬೆಂಗಳೂರಿನ ಲಿಂಗಧೀರನಹಳ್ಳಿ ನಿವಾಸಿಗಳಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read