ತನ್ನ ಪ್ರಾಕೃತಿಕ ಸೌಂದರ್ಯದಿಂದ ಪ್ರವಾಸಿಗರಿಗೆ ಭಾರೀ ಇಷ್ಟವಾಗುವ ಕೇರಳದ ಬೆಟ್ಟಗುಡ್ಡಗಳು ಪಶ್ಚಿಮ ಘಟ್ಟಗಳ ಭಾಗವಾಗಿವೆ. ಈ ಬೆಟ್ಟ-ಗುಡ್ಡಗಳು ತಮ್ಮ ಅದ್ಭುತ ಸಸ್ಯರಾಶಿಯ ಮೂಲಕ ಎಂಥವರಿಗೂ ಮನಸ್ಸಿನಲ್ಲಿ ಉಳಿದು ಬಿಡುತ್ತವೆ.
ಸಿದ್ಧಾರ್ಥ ಬಾಕಾರಿಯಾ ಹೆಸರಿನ ನೆಟ್ಟಿಗರೊಬ್ಬರು ಶೇರ್ ಮಾಡಿರುವ ಈ ವಿಡಿಯೋದಲ್ಲಿ, ಗುಡ್ಡಗಳ ಮೂಲಕ ರಸ್ತೆಯೊಂದು ಹಾದು ಹೋಗುತ್ತಿರುವುದನ್ನು ಸೂರ್ಯೋದಯ ಅಥವಾ ಸೂರ್ಯಸ್ತದ ಅವಧಿಯಲ್ಲಿ ತೋರಲಾಗಿದೆ.
ಸೂರ್ಯನ ಹೊಂಬಣ್ಣದಿಂದ ಇನ್ನಷ್ಟು ಪ್ರಕಾಶಿಸುವ ಈ ಬೆಟ್ಟ-ಗುಡ್ಡಗಳ ದೃಶ್ಯಾವಳಿಯ ವಿಡಿಯೋಗೆ, “ಈ ಸೌಂದರ್ಯ ವರ್ಣಿಸಲು ಪದಗಳು ಸಾಲುತ್ತಿಲ್ಲ. ಕೇರಳದಲ್ಲಿ ಇದು ಯಾವ ಜಾಗವೆಂದು ಗೆಸ್ ಮಾಡಿ,” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ ಸಿದ್ಧಾರ್ಥ್.
“ಮುನ್ನಾರ್ ಹಾಗೂ ಥೆಕ್ಕಡಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 85ರ ಭಾಗ ಇದಾಗಿದೆ,” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮೂಲಕ ಉತ್ತರಿಸಿದ್ದಾರೆ.
https://twitter.com/SidBakaria/status/1648937689432092673?ref_src=twsrc%5Etfw%7Ctwcamp%5Etweetembed%7Ctwterm%5E1648937689432092673%7Ctwgr%5E27ea7b4ec44afcc8c74b2217cce4b45b267ae38e%7Ctwcon%5Es1_&ref_url=https%3A%2F%2Fwww.ndtv.com%2Foffbeat%2Faerial-video-showing-winding-roads-amid-lush-green-hills-in-kerala-wows-internet-3969627