ಡಿಸಿಇಟಿ 3ನೇ ಸುತ್ತಿನಲ್ಲಿ ಭಾಗವಹಿಸಲು ಮುಂಗಡ ಠೇವಣಿ ಕಡ್ಡಾಯ

ಬೆಂಗಳೂರು: ಡಿಸಿಇಟಿ ಮೂರನೇ ಹಾಗೂ ಅಂತಿಮ ಸುತ್ತಿನಲ್ಲಿ ಭಾಗವಹಿಸಲು ಅರ್ಹರಾಗುವ ಡಿಪ್ಲೊಮಾ ಅಭ್ಯರ್ಥಿಗಳು ತಮಗೆ ಬೇಕಾದ ಕಾಲೇಜು, ಕೋರ್ಸ್ ಆಯ್ಕೆಗೆ ಮುನ್ನ ಕಾಷನ್ ಡಿಪಾಸಿಟ್ ಪಾವತಿಸಬೇಕು. ನಂತರವೇ ಇಚ್ಛೆ/ ಆಯ್ಕೆಗೆ ಅವಕಾಶ ನೀಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಮೂರನೇ ಸುತ್ತಿನಲ್ಲಿ ಭಾಗವಹಿಸಲು ಆಸಕ್ತ ಅರ್ಹ ಅಭ್ಯರ್ಥಿಗಳು 40,000 ರೂ.ಗಳನ್ನು ಠೇವಣಿಯಾಗಿ ಪಾವತಿಸಬೇಕು. ಪರಿಶಿಷ್ಟ ಜಾತಿ, ವರ್ಗದ ಅಭ್ಯರ್ಥಿಗಳು 10,000 ರೂ. ಪಾವತಿಸಬೇಕು. ಡಿಪಾಸಿಟ್ ಪಾವತಿಸದ ಅಭ್ಯರ್ಥಿಗಳು ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ ಎಂದು ಹೇಳಲಾಗಿದೆ.

ಮೂರನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದಲ್ಲಿ ಅಭ್ಯರ್ಥಿ ಪಾವತಿಸಿದ ಕಾಷನ್ ಡಿಪಾಸಿಟ್ ಅನ್ನು ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಮೂರನೇ ಸುತ್ತಿನಲ್ಲಿ ಅಭ್ಯರ್ಥಿಗೆ ಸೀಟು ಹಂಚಿಕೆಯಾಗಿ ನಿಗದಿತ ಶುಲ್ಕ ಪಾವತಿ ಮಾಡದಿದ್ದಲ್ಲಿ ಅಥವಾ ಕಾಲೇಜಿಗೆ ಪ್ರವೇಶ ಪಡೆದುಕೊಳ್ಳದಿದ್ದಲ್ಲಿ ಅಥವಾ ರದ್ದುಗೊಳಿಸಲು ಬಯಸಿದರೆ ಕಾಷನ್ ಡಿಪಾಸಿಟ್ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ನಿಯಮಾನುಸಾರ ದಂಡವನ್ನು ಕೂಡ ಪಾವತಿಸಬೇಕಾಗುತ್ತದೆ. ಅಲ್ಲದೆ, ಮುಂದಿನ ವರ್ಷಗಳ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಲು ಅರ್ಹತೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

ಅರ್ಹತೆ ಪಡೆದ ಅಭ್ಯರ್ಥಿಗಳು ಆಗಸ್ಟ್ 11 ರಿಂದ 14ರೊಳಗೆ ಕಾಷನ್ ಡಿಪಾಸಿಟ್ ಪಾವತಿಸಬೇಕು. ಆಗಸ್ಟ್ 11 ರಿಂದ 16 ರವರೆಗೆ ಆಯ್ಕೆಗೆ ಅವಕಾಶ ನೀಡಲಾಗುವುದು. ಸೀಟು ಹಂಚಿಕೆ ತಾತ್ಕಾಲಿಕ ಫಲಿತಾಂಶವನ್ನು ಆಗಸ್ಟ್ 16ರಂದು ಸಂಜೆ 4 ಗಂಟೆಗೆ ಪ್ರಕಟಿಸಲಾಗುವುದು. ಆಗಸ್ಟ್ 18ರಂದು ಸಂಜೆ 4 ಗಂಟೆ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು. ಆಗಸ್ಟ್ 12ರಂದು ದಾಖಲೆ ಪರಿಶೀಲನೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬರುವ ಅಭ್ಯರ್ಥಿಗಳು ಅರ್ಹರಾದ ನಂತರ ಕಾಷನ್ ಡಿಪಾಸಿಟ್ ಕಟ್ಟಿ ಇಚ್ಛೆ ಆಯ್ಕೆ ದಾಖಲಿಸಬೇಕು. ಆರ್ಕಿಟೆಕ್ಚರ್ ಕೋರ್ಸ್ ಪ್ರವೇಶಕ್ಕೆ ಪಾವತಿಸುವ ಅವಶ್ಯಕತೆ ಇರುವುದಿಲ್ಲ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read