Adipurush Movie : ‘ಆದಿಪುರುಷ್’ ಚಿತ್ರತಂಡದವರನ್ನು ಸುಡಬೇಕು’ : ಶಕ್ತಿಮಾನ್ ನಟ ‘ಮುಖೇಶ್ ಖನ್ನಾ’ ಆಕ್ರೋಶ

‘ಆದಿಪುರುಷ್’ ಚಿತ್ರ ಭಾರಿ ಟೀಕೆಗೆ ವ್ಯಕ್ತವಾಗಿದ್ದು, ಹಿಂದೂ ಸಂಘಟನೆಗಳು ಆದಿಪುರುಷ್ ಚಿತ್ರ ತಂಡದ ವಿರುದ್ಧ ಸಿಡಿದೆದ್ದಿದೆ. ಇದೀಗ, ಚಿತ್ರತಂಡದವರನ್ನು ಸುಟ್ಟು ಹಾಕಬೇಕು ಎಂದು ಶಕ್ತಿಮಾನ್ ನಟ ಮುಖೇಶ್ ಖನ್ನಾ ಆಕ್ರೋಶ ಹೊರ ಹಾಕಿದ್ದಾರೆ.

ನಟ ಮುಖೇಶ್ ಖನ್ನಾ ಅವರು ‘ಆದಿಪುರುಷ್’ ಸಿನಿಮಾ ನಿರ್ಮಾಪಕ ಹಾಗೂ ನಿರ್ದೇಶಕರ ವಿರುದ್ಧ ವಾಗ್ದಾಳಿ ನಡೆಸಿದ್ದು, ನಮ್ಮ ಧರ್ಮಗ್ರಂಥಗಳನ್ನು ಅವಮಾನಿಸುವ ಹಕ್ಕನ್ನು ಅವರಿಗೆ ಯಾರು ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಚಿತ್ರದಲ್ಲಿ ಬಳಸಲಾದ ಸಂಭಾಷಣೆಗಳು ಮತ್ತು ವೇಷಭೂಷಣಗಳನ್ನು ಖಂಡಿಸಿದರು.ಇದು ರಾಮಾಯಣದೊಂದಿಗಿನ ಭಯಾನಕ ಜೋಕ್ ಎಂದು ನಾನು ಭಾವಿಸುತ್ತೇನೆ. ನಮ್ಮ ಧರ್ಮಗ್ರಂಥಗಳನ್ನು ಅವಮಾನಿಸುವ ಹಕ್ಕನ್ನು ಯಾರು ನೀಡಿದ್ದಾರೆ? ಅವರಿಬ್ಬರೂ ರಾಮಾಯಣವನ್ನು ಸಹ ಓದಿಲ್ಲ, ಈ ಸಿನಿಮಾ ಸಂಪೂರ್ಣ ಕಳಪೆ ಆಗಿದೆ ಎಂದರು.

‘ಇಂಥ ಸಿನಿಮಾ ಮಾಡಿದವರನ್ನು ಕ್ಷಮಿಸಬಾರದು. ಇವರನ್ನು 50 ಡಿಗ್ರಿ ಸೆಲ್ಸಿಯಸ್ನಲ್ಲಿ ಸುಡಬೇಕು ಎಂದು ನಟ ಮುಖೇಶ್ ಖನ್ನಾ ಆಕ್ರೋಶ ಹೊರ ಹಾಕಿದ್ದಾರೆ. ‘ಆದಿಪುರುಷ್’ ಚಿತ್ರ ಭಾರಿ ಟೀಕೆಗೆ ವ್ಯಕ್ತವಾಗಿದ್ದು, ದಿನದಿಂದ ದಿನಕ್ಕೆ ಈ ಸಿನಿಮಾದ ಕಲೆಕ್ಷನ್ ಕಡಿಮೆಯಾಗುತ್ತಿದೆ. ಚಿತ್ರದ ವಿರೋಧ ಭಾರಿ-ಟೀಕೆ ವ್ಯಕ್ತವಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read