ಪೋಷಕರಿಗೆ ಮುಖ್ಯ ಮಾಹಿತಿ : ಆದರ್ಶ ವಿದ್ಯಾಲಯದ 6 ನೇ ತರಗತಿ ಪ್ರವೇಶಾತಿ ದಿನಾಂಕ ವಿಸ್ತರಣೆ

ಬೆಂಗಳೂರು : ಆದರ್ಶ ವಿದ್ಯಾಲಯದ 6ನೇ ತರಗತಿ ದಾಖಲಾತಿಗೆ ಪ್ರವೇಶಾತಿ ದಿನಾಂಕವನ್ನು 19.06.2023ರ ವರೆಗೆ ವಿಸ್ತರಿಸಿ ಪ್ರಕಟಣೆ ಹೊರಡಿಸಲಾಗಿದೆ.

2023-24ನೇ ಸಾಲಿನ ಆದರ್ಶ ವಿದ್ಯಾಲಯಗಳ 6ನೇ ತರಗತಿ ದಾಖಲಾತಿಗೆ ಮೊದಲ ಸುತ್ತಿನ ದಿನಾಂಕವನ್ನು 12.06.2023ಕ್ಕೆ ನಿಗಧಿಗೊಳಿಸಲಾಗಿತ್ತು, ಆದರೆ ಕೆಲವು ಆದರ್ಶ ವಿದ್ಯಾಲಯಗಳ ಮುಖ್ಯ ಶಿಕ್ಷಕರು ಮೊದಲ ಸುತ್ತಿನ ಪ್ರವೇಶಾತಿ ದಿನಾಂಕದವನ್ನು ವಿಸ್ತರಿಸಲು ಕೋರಿರುತ್ತಾರೆ. ಈ ಹಿನ್ನಲೆಯಲ್ಲಿ ಮೊದಲ ಸುತ್ತಿನ ಪ್ರವೇಶದ ದಿನಾಂಕ 19.06.2023ರ ವರೆಗೆ ವಿಸ್ತರಿಸಲಾಗಿದೆ.

ಮೊದಲ ಸುತ್ತಿಗೆ ಪ್ರವೇಶ ಪಡೆಯದ ವಿದ್ಯಾರ್ಥಿಗಳಿಗೆ ಈಗಾಗಲೇ ರಾಜ್ಯ ಯೋಜನಾ ನಿರ್ದೇಶಕರ ಕಛೇರಿಯಿಂದ SMS ಕಳುಹಿಸಲಾಗಿದೆ. ಶಾಲಾ ಮುಖ್ಯ ಶಿಕ್ಷಕರು ಸದರಿ ವಿದ್ಯಾರ್ಥಿಗಳ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಪ್ರವೇಶಾತಿ ಪಡೆಯಲು ಸೂಚಿಸುವುದು ಹಾಗೂ ಕರೆ ಮಾಡಿರುವುದಕ್ಕೆ ದಾಖಲೆ ನಿರ್ವಹಣೆ ಮಾಡುವುದು ಎಂದು ರಾಜ್ಯ ಯೋಜನಾ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read