ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ತಮನ್ನಾ ಭಾಟಿಯಾ ವಿಚಾರಣೆ

ಗುವಾಹಟಿ: ಬಿಟ್ ಕಾಯಿನ್ ಮತ್ತಿತರ ಕ್ರಿಪ್ಟೋ ಕರೆನ್ಸಿಗಳ ಮೈನಿಂಗ್ ನೆಕದಲ್ಲಿ ಹೂಡಿಕೆದಾರರನ್ನು ವಂಚಿಸಿದ HPZ ಟೋಕನ್ ಮೊಬೈಲ್ ಅಪ್ಲಿಕೇಶನ್ ಗೆ ಸಂಬಂಧಿಸಿದ ಪ್ರಕರಣದಲ್ಲಿ ಖ್ಯಾತ ನಟಿ ತಮನ್ನಾ ಭಾಟಿಯ ಅವರನ್ನು ಜಾರಿ ನಿರ್ದೇಶನಾಲಯ ಗುರುವಾರ ವಿಚಾರಣೆ ನಡೆಸಿದೆ.

ಆಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಅಡಿಯಲ್ಲಿ ತಮನ್ನಾ ಭಾಟಿಯಾ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಹೆಚ್‌ಪಿಜಡ್ ಟೋಕನ್ ಮೊಬೈಲ್ ಆಪ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ತಮನ್ನಾ ದೊಡ್ಡ ಮೊತ್ತದ ಹಣ ಪಡೆದಿದ್ದಾರೆ. ಅವರ ವಿರುದ್ಧ ಯಾವುದೇ ಅಕ್ರಮ ಆರೋಪಗಳಿಲ್ಲ. ಆದರೆ ಪ್ರಕರಣದ ಕುರಿತಾಗಿ ಅವರಿಂದ ಕೆಲವು ಮಾಹಿತಿ ಪಡೆಯಲಾಗಿದೆ.

ವಂಚನೆಯಿಂದ ಬಂದ ಆದಾಯವನ್ನು ಅನೇಕ ಬೇನಾಮಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದ್ದು, ಇದಕ್ಕಾಗಿ ನಕಲಿ ವ್ಯಾಪಾರಿ ಐಡಿಗಳನ್ನು ತೆರೆಯಲಾಗಿತ್ತು. ಹೂಡಿಕೆದಾರರಿಗೆ ಆಮಿಷವೊಡ್ಡಿ ಹಣ ಸ್ವೀಕರಿಸಿ ಜನರಿಗೆ ಮೋಸ ಮಾಡಲಾಗಿತ್ತು ಎಂದು ಇಡಿ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read