34 ನೇ ವಸಂತಕ್ಕೆ ಕಾಲಿಟ್ಟ ನಟಿ ಶ್ರದ್ಧಾ ಶ್ರೀನಾಥ್

ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ಇಂದು 34ನೇ ವಸಂತಕ್ಕೆ ಕಾಲಿಟ್ಟಿದ್ದು,  ಕುಟುಂಬದೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿದ್ದಾರೆ.

2015 ರಲ್ಲಿ ತೆರೆಕಂಡ ವಿನಯ್ ಗೋವಿಂದ್ ನಿರ್ದೇಶನದ ‘ಕೊಹಿನೂರ್’ ಎಂಬ ಮಲಯಾಳಂ ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ ಇವರು 2016ರಲ್ಲಿ ಕನ್ನಡದಲ್ಲಿ ಪವನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದ ‘ಯುಟರ್ನ್’ ನಲ್ಲಿ ತೆರೆ ಹಂಚಿಕೊಂಡರು.

2016 ರಲ್ಲಿ ‘ಕಾಟ್ರು ವೆಲಿಯಿದೈ’ ಚಿತ್ರದಲ್ಲಿ ಅತಿಥಿ ಪಾತ್ರ  ಒಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಟಿ ಶ್ರದ್ಧಾ ಶ್ರೀನಾಥ್ ಕನ್ನಡದಲ್ಲಿ ‘ಉರ್ವಿ’  ‘ಆಪರೇಷನ್ ಅಲಮೇಲಮ್ಮ’  ರುಸ್ತುಮ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡರು.

ಶ್ರದ್ಧಾ ಶ್ರೀನಾಥ್ ಇತ್ತೀಚಿಗೆ  ಅಭಿನಯಿಸಿರುವ ‘ಮೆಕ್ಯಾನಿಕ್ ರಾಕಿ’ ‘ಕಲಿಯುಗಂ’ ‘ಲೆಟರ್ಸ್ ಟು ಮಿಸ್ಟರ್ ಖನ್ನ’, ಹಾಗೂ ‘ಆರ್ಯನ್’ ಚಿತ್ರದ  ಶೂಟಿಂಗ್ ಕಂಪ್ಲೀಟ್ ಆಗಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read