ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ನಟಿ ಸಂಗೀತ ಭಟ್ ಫೋಟೋಶೂಟ್ನಲ್ಲೂ ಸಾಕಷ್ಟು ಬಿಜಿಯಾಗಿರುತ್ತಾರೆ.
ಸಂಗೀತ ಭಟ್ ಇತ್ತೀಚೆಗಷ್ಟೇ ಫೋಟೋಶೂಟ್ ಮಾಡಿಸಿದ್ದು, ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಗಳು ಬಂದಿವೆ.
2011ರಂದು ತೆರೆಕಂಡ ‘ದೂ’ ಎಂಬ ತಮಿಳು ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಸಂಗೀತ ಭಟ್ ಬಳಿಕ ತೆಲುಗು ಹಾಗೂ ಕನ್ನಡ ಚಿತ್ರರಂಗದ ಬೇಡಿಕೆಯ ನಟಿಯಾದರು. ಕೊನೆಯದಾಗಿ ‘ರೂಪಾಂತರ’ ದಲ್ಲಿ ಕಾಣಿಸಿಕೊಂಡಿದ್ದ ಇವರು ಇತ್ತೀಚೆಗೆ ‘ಕ್ಲಾಂತ’ ಚಿತ್ರದಲ್ಲಿ ಅಭಿನಯಿಸಿದ್ದಾರೆ.