BIGG NEWS : ನಟಿ ‘ರಶ್ಮಿಕಾ ಮಂದಣ್ಣ’ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್ |Deep Fake Video

ನ್ಯಾಷನಲ್ ಸ್ಟಾರ್ , ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣಗೆ ಮತ್ತೊಂದು ಡೀಫ್ ಫೇಕ್ ಸಂಕಷ್ಟ ಎದುರಾಗಿದ್ದು, ನಟಿ ‘ರಶ್ಮಿಕಾ ಮಂದಣ್ಣ’ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್ ಆಗಿದೆ.

ಹೌದು, ನಟಿ ‘ರಶ್ಮಿಕಾ ಮಂದಣ್ಣ’ ಅವರ ಮೂರನೇ ಡೀಪ್ ಫೇಕ್ ವಿಡಿಯೋ ವೈರಲ್ ಹರಿದಾಡುತ್ತಿದೆ. ಇತ್ತೀಚೆಗಷ್ಟೇ ಬ್ಲಾಕ್ ಔಟ್ ಫಿಟ್ನಲ್ಲಿ ರಶ್ಮಿಕಾ ಡ್ಯಾನ್ಸ್ ಮಾಡೋ ರೀತಿ ಫೇಕ್ ಮಾಡಿ ವೈರಲ್ ಮಾಡಲಾಗಿತ್ತು. ನಂತರ ಕಿಡಿಗೇಡಿಯೊಬ್ಬ ಮತ್ತೊಂದು ಡೀಪ್ ಫೇಕ್ ವಿಡಿಯೋ ಸೃಷ್ಟಿಸಿ ಹರಿಬಿಟ್ಟಿದ್ದಾನೆ.

ಈ ಮೊದಲು ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವೀಡಿಯೊ ಇತ್ತೀಚೆಗೆ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ತಂತ್ರಜ್ಞಾನದ ದುರುಪಯೋಗದ ಬಗ್ಗೆ ಅಂತರ್ಜಾಲದಲ್ಲಿ ಭಾರಿ ಚರ್ಚೆ ನಡೆದಿತ್ತು, ನಟ ಅಮಿತಾಬ್ ಬಚ್ಚನ್ ಸೇರಿದಂತೆ ಹಲವರು ಇದನ್ನು ಖಂಡಿಸಿದ್ದರು. ಇದೀಗ ವೈರಲ್ ಆದ ವಿಡಿಯೋದಲ್ಲಿ ಬೇರೆ ಮಹಿಳೆಯ ಮುಖವನ್ನು ರಶ್ಮಿಕಾ ಮಂದಣ್ಣ ಅವರ ಮುಖವಾಗಿ ಮಾರ್ಫಿಂಗ್ ಮಾಡಲಾಗಿದೆ.

ಡೀಪ್ಫೇಕ್ ವಿಡಿಯೋ ಮಾಡುವ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಹಲವರು ಒತ್ತಾಯಿಸಿದ್ದರು. ಕೇಂದ್ರ ಸರಕಾರ ಕೂಡ ಇದನ್ನು ಗಂಭೀರವಾಗಿ ತೆಗೆದುಕೊಂಡು, ಡೀಪ್ಫೇಕ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ಹೇಳಿತ್ತು. ಆದರೂ, ಡೀಪ್ಫೇಕ್ ಹಾವಳಿ ಮುಂದುವರೆದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read