ತಮ್ಮ ನೆಚ್ಚಿನ ನಟ-ನಟಿಯರನ್ನು ನೋಡುತ್ತಿದ್ದಂತೆ ಅಭಿಮಾನಿಗಳು ವರ್ತನೆ ಅತಿರೇಕಕ್ಕೆ ಹೋಗುವುದುನ್ನು ನೀವು ನೋಡಿರುತ್ತೀರಿ. ಅಂತಹದ್ದೇ ಒಂದು ಘಟನೆ ನಡೆದಿದೆ.
ನಟಿ ರಾಗಿಣಿ ದ್ವಿವೇದಿ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳನ್ನು ಮಾತನಾಡಿಸುತ್ತಿರುವಾಗ ಅಭಿಮಾನಿಯೋರ್ವ ರಾಗಿಣಿಯ ಕೈ ಹಿಡಿದಿದ್ದಾನೆ. ಅಷ್ಟಕ್ಕೇ ನಟಿ ರಾಗಿಣಿ ರಪ್ ಅಂತ ಅಭಿಮಾನಿಯೋರ್ವನ ಕೆನ್ನೆಗೆ ಭಾರಿಸಿದ್ದಾರೆ.ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ರಾಗಿಣಿ ಇತ್ತೀಚೆಗೆ ಒಂದು ಸಾಂಗ್ ಲಾಂಚ್ ಇವೆಂಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪಿಂಕ್ ಬಣ್ಣದ ಫ್ರಾಕ್ ತೊಟ್ಟು ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ್ದರು.