ತಮಿಳು, ಮಲಯಾಳಂ ಹಾಗೂ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಮಾಳವಿಕಾ ಮೋಹನನ್ ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಬಿಜಿಯಾಗಿರುತ್ತಾರೆ.
ದಿನಕ್ಕೊಂದು ಫೋಟೋ ಅಪ್ಲೋಡ್ ಮಾಡುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿದ್ದಾರೆ. ನಟಿ ಮಾಳವಿಕಾ ಮೋಹನನ್ ಇತ್ತೀಚೆಗಷ್ಟೇ ಫೋಟೋಗೆ ಫೋಸ್ ನೀಡಿದ್ದು, ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ನಟಿ ಮಾಳವಿಕಾ ಮೋಹನನ್ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.
ಸಿನಿಮಾ ವಿಚಾರಕ್ಕೆ ಬಂದರೆ ನಟಿ ಮಾಳವಿಕಾ ಮೋಹನನ್ ಅವರ ತಮಿಳಿನ ‘ತಂಗಲಾನ್’ ಚಿತ್ರ ಕಳೆದ ತಿಂಗಳು ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ. ಇತ್ತೀಚೆಗೆ ‘ಸರ್ದಾರ್ 2’ ಸೇರಿದಂತೆ ಡಾರ್ಲಿಂಗ್ ಪ್ರಭಾಸ್ ಅಭಿನಯದ ‘ರಾಜಾ ಸಾಬ್’ ನಲ್ಲಿ ತೆರೆಹಂಚಿಕೊಂಡಿದ್ದು, ಇದರ ಶೂಟಿಂಗ್ನಲ್ಲಿ ನಿರತರಾಗಿದ್ದಾರೆ.