ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಇಲಿಯಾನಾ

Ileana DCruz, portrait, Indian actress, bollywood, blue dress, brunette, HD wallpaper | Peakpx

ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮಾಡಿಸಿರುವ ನಟಿ ಇಲಿಯಾನಾ ಡಿಕ್ರೂಜ್ ಇಂದು  ತಮ್ಮ 37ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು, ಅವರ ಅಭಿಮಾನಿಗಳಿಂದ ಹಾಗೂ ಸಿನಿ ತಾರೆಯರಿಂದ ಶುಭಾಶಯಗಳು ಮಹಾಪೂರವೇ ಹರಿದು ಬಂದಿದೆ.

ವಿಎಸ್ ಚೌದರಿ ನಿರ್ದೇಶನದ ‘ದೇವದಾಸು’ ಎಂಬ ತೆಲುಗು ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು, ಬಳಿಕ ಅದೇ ವರ್ಷದಲ್ಲಿ ಮಹೇಶ್ ಬಾಬು ಜೊತೆ ‘ಪೋಕಿರಿ’ ಸಿನಿಮಾದಲ್ಲಿ ತೆರೆ ಹಂಚಿಕೊಂಡರು.

ನಟಿ ಇಲಿಯಾನಾ ‘ಕೇಡಿ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು. ಒಟ್ಟಾರೆ 2006 ರಂದು ತೆಲುಗು ಮತ್ತು ತಮಿಳಿನಲ್ಲಿ ಇವರ ಐದು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆದವು. ನಟಿ ಇಲಿಯಾನ ಇತ್ತೀಚಿಗೆ ‘ಅನ್ ಫೇರ್ ಅಂಡ್ ಲವ್ಲಿ’ ಚಿತ್ರದ ಶೂಟಿಂಗ್ ಮುಕ್ತಾಯಗೊಳಿಸಿದ್ದು, ‘ಲವರ್’ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read