ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಭೂಮಿಕಾ ಚಾವ್ಲಾ

Bhumika Chawla Family

ಖ್ಯಾತ ಬಹುಭಾಷ ನಟಿ ಭೂಮಿಕಾ ಚಾವ್ಲಾ ಇಂದು ತಮ್ಮ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಭೂಮಿಕಾ 2000ರಲ್ಲಿ ತೆರೆ ಕಂಡ ‘ಯುವಕುಡು‌’ ಎಂಬ ತೆಲುಗು ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಪ್ರಾರಂಭಿಸಿದರು.

ತೆಲುಗು ಸೇರಿದಂತೆ ಹಲವಾರು ಚಿತ್ರರಂಗಗಳಲ್ಲಿ ಲೆಕ್ಕವಿಲ್ಲದಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರು ಕನ್ನಡದಲ್ಲಿ ನಟಿಸಿದ ಮೊದಲ ಚಿತ್ರ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಗಾಡ್ ಫಾದರ್’, ಇದಾದ ಬಳಿಕ 2015ರಲ್ಲಿ ಬಿಡುಗಡೆಯಾದ ಲವ್ ಯು ಆಲಿಯಾ ದಲ್ಲಿ ತೆರೆ ಹಂಚಿಕೊಂಡಿದ್ದರು.

ನಟಿ ಭೂಮಿಕಾ ಚಾವ್ಲಾ ಇತ್ತೀಚಿಗೆ ಕೊನೆಯದಾಗಿ ಸಲ್ಮಾನ್ ಖಾನ್ ನಟನೆಯ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ನಲ್ಲಿ ಅಭಿನಯಿಸಿದ್ದರು. ಇಂದು ಸಾಮಾಜಿಕ ಜಾಲತಾಣದಲ್ಲಿ ಭೂಮಿಕಾ ಚಾವ್ಲಾ ಗೆ ಅವರ ಅಭಿಮಾನಿಗಳಿಂದ ಹಾಗೂ‌ ಸಿನಿ ತಾರೆಯದಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಇಂದು ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read