ತೆಲುಗು ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಬೇಡಿಕೆಯ ನಟಿ ಅಮಲಾ ಪೌಲ್ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. 2009ರಲ್ಲಿ ತೆರೆ ಕಂಡ ‘ನೀಲತಾಮರ’ ಎಂಬ ಮಲಯಾಳಂ ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ ಇವರು 2010 ರಲ್ಲಿ ಸಿಂಧು ಸಮವೇಲಿ ಎಂಬ ತಮಿಳು ಸಿನಿಮಾದಲ್ಲಿ ಅಭಿನಯಿಸಿದರು.
ತೆಲುಗು, ತಮಿಳು, ಮಲೆಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಅಮಲಾ ಪೌಲ್ 2017ರಲ್ಲಿ ಬಿಡುಗಡೆಯಾದ ಕಿಚ್ಚ ಸುದೀಪ್ ನಟನೆಯ ‘ಹೆಬ್ಬುಲಿ’ ಚಿತ್ರದಲ್ಲಿ ನಂದಿನಿ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರಾದರು.
ಇತ್ತೀಚಿಗೆ ನಟಿ ಅಮಲಾ ಪೌಲ್ ಅಭಿನಯಿಸುತ್ತಿರುವ ಆಡುಜೀವಿತಂ ಚಿತ್ರದ ಶೂಟಿಂಗ್ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಇದರ ಬೆನ್ನಲ್ಲೇ ‘ದ್ವಿಜ’ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ.
Wishing the incredibly talented and beautiful #AmalaPaul a very Happy Birthday! @Amala_ams 🥳🎊#HBDAmalaPaul #ThinkMusic pic.twitter.com/PWFjyBfmIY
— Think Music (@thinkmusicindia) October 26, 2023